​ತೋಟಗಾರಿಕೆ ಬೆಳೆ ಯಂತ್ರೋಪಕರಣಗಳಿಗೆ ಸಹಾಯಧನ

Update: 2020-09-13 16:49 GMT

ಉಡುಪಿ, ಸೆ.13: ಪ್ರಸ್ತುತ ಸಾಲಿನ ಆರ್‌ಕೆವಿವೈ ಯಾಂತ್ರೀಕರಣ ಮತ್ತು ಕೇಂದ್ರ ಪುರಸ್ಕೃತ ಕೃಷಿ ಯಾಂತ್ರೀಕೃತ ಉಪಅಭಿಯಾನ ಕಾರ್ಯಕ್ರಮಗಳಡಿ ಶೇ. 50ರ ಸಹಾಯಧನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತೀ ಸಣ್ಣ ಹಾಗೂ ಮಹಿಳಾ ಫಲಾನುಭಗಳಿಗೆ ಶೇ. 40 ರ ಸಹಾಯಧನದಲ್ಲಿ ಇತರೇವರ್ಗದ ಫಲಾನುಭಗಳಿಗೆ ಟ್ರ್ಯಾಕ್ಟರ್ ಯಂತ್ರೋಪಕರಣವನ್ನು ಹೊರತು ಪಡಿಸಿ ಉಳಿದ ತೋಟಗಾರಿಕೆ ಬೆಳೆಗಳಲ್ಲಿ ಅವಶ್ಯಕವಿರುವ ಅನುಮೋದಿತ ಯಂತ್ರೋಪಕರಣಗಳಿಗೆ ಜಿಲ್ಲೆಯ ರೈತರಿಗೆ ಅವಕಾಶ ಕಲ್ಪಿಸವಾಗುತ್ತಿದೆ.

ಪ್ರತಿ ರೈತ ಫಲಾನುಭಗಳಿಗೆ ಗರಿಷ್ಟ 5 ಯಂತ್ರೋಪಕರಣಗಳಿಗೆ 1.25 ಲಕ್ಷ ರೂ. ಗರಿಷ್ಟ ಸಹಾಯಧನ ಮಿತಿಯೊಂದಿಗೆ ಸಹಾಯಧನದ ಮೊತ್ತವನ್ನು ಇಸಿಎಸ್ ಮೂಲಕ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗಳಿಗೆ ವಿತರಿಸಲಾಗುತ್ತದೆ. ರೈತ ಫಲಾನುಭವಿಗಳು ಖರೀದಿಸುವ ಯಂತ್ರೋಪಕರಣ ಗಳಿಗೆ ಒಮ್ಮೆ ಸಹಾಯಧನ ಪಡೆಯಲು ಅವಕಾಶವಿದೆ.

ಅರ್ಜಿದಾರರು ತೋಟಗಾರಿಕೆ ಬೆಳೆ ಬೆಳೆಯುತ್ತಿರುವ ಬಗ್ಗೆ ವಿವರಗಳುಳ್ಳ ಆರ್‌ಟಿಸಿ ಅಥವಾ ಪಹಣಿಯನ್ನು ಇಲಾಖೆಗೆ ಒದಗಿಸಬೇಕು. ಅರ್ಜಿ ನೀಡುವ ರೈತರು ಎಪ್ರಿಲ್ ನಂತರದಲ್ಲಿ ಖರೀದಿಸಿದ ಯಂತ್ರೋಪಕರಣಗಳಿಗೆ ಮಾತ್ರ ಸಹಾಯಧನ ನೀಡಲು ಅವಕಾಶವಿರುತ್ತದೆ ಎಂದು ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News