ಕಾಸರಗೋಡು: 124 ಮಂದಿಗೆ ಕೊರೋನ ಪಾಸಿಟಿವ್

Update: 2020-09-13 18:15 GMT

ಕಾಸರಗೋಡು, ಸೆ.13: ಜಿಲ್ಲೆಯಲ್ಲಿ ಇಂದು 124 ಮಂದಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಪೈಕಿ 120 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಮೂವರು ವಿದೇಶ ಹಾಗೂ ಹೊರ ರಾಜ್ಯದಿಂದ ಆಗಮಿಸಿದ ಓರ್ವನಲ್ಲಿ ಸೋಂಕು ಪತ್ತೆಯಾಗಿದೆ. ಈ ನಡುವೆ ಇಂದು 182 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಇಂದು ಸೋಂಕು ಪತ್ತೆಯಾದ 124 ಮಂದಿಯಲ್ಲಿ ಈಸ್ಟ್ ಎಳೇರಿ 18, ಕಾಞಂಗಾಡ್ 14, ನೀಲೇಶ್ವರ, ಅಜಾನೂರು ತಲಾ 9, ಕಿನಾನೂರು ಕರಿಂದಲ, ಚೆಂಗಳ ತಲಾ 8, ಕಯ್ಯೂರು, ಚಿಮೇನಿ ತಲಾ 7, ಮುಳಿಯಾರು 6, ಪಳ್ಳಿಕೆರೆ, ಮಧೂರು, ಪುತ್ತಿಗೆ ತಲಾ 5, ಚೆಮ್ನಾಡ್ 4, ಪನತ್ತಡಿ, ಬದಿಯಡ್ಕ ತಲಾ 3, ಮಂಜೇಶ್ವರ, ಬೇಡಡ್ಕ, ಪಡನ್ನ ತಲಾ 2, ಪುಲ್ಲೂರು ಪೆರಿಯ, ಚೆರ್ವತ್ತೂರು, ಮಂಗಲ್ಪಾಡಿ, ಮೀಂಜ, ಎಣ್ಮಕಜೆ, ಮೊಗ್ರಾಲ್ ಪುತ್ತೂರು, ಕುತ್ತಿಕೋಲು, ಕುಂಬಳೆ ಹಾಗೂ ತ್ರಿಕ್ಕರಿಪುರ ಗ್ರಾಪಂ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ಸೇರಿದೆ.

ಜಿಲ್ಲೆಯಲ್ಲಿ ಇದುವರೆಗೆ 7,194 ಮಂದಿಗೆ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿದೆ. 1,953 ಮಂದಿ ಈಗ ಚಿಕಿತ್ಸೆಯಲ್ಲಿದ್ದಾರೆ. 5,243 ಮಂದಿ ನಿಗಾದಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News