ಕುಂದಾಪುರ: ನುಸ್ರತುಲ್ ಮಸಾಕೀನ್ ಅಧ್ಯಕ್ಷರಾಗಿ ಮಹಮ್ಮದ್ ರಫೀಕ್ ಆಯ್ಕೆ
ಕುಂದಾಪುರ, ಸೆ.14: ಕುಂದಾಪುರ ತಾಲೂಕು ನುಸ್ರತುಲ್ ಮಸಾಕೀನ್ ಅಸೋಸಿಯೇಶನ್ ಇದರ 2020-21ನೆ ಸಾಲಿನ ನೂತನ ಅಧ್ಯಕ್ಷರಾಗಿ ಮಹಮ್ಮದ್ ರಫೀಕ್ ಗಂಗೊಳ್ಳಿ(ಬಿಎಸ್‌ಎಫ್) ಆಯ್ಕೆಯಾಗಿದ್ದಾರೆ.
ಸೆ.11ರಂದು ನಡೆದ ಸಂಸ್ಥೆಯ ಮಹಾಸಭೆಯಲ್ಲಿ ಈ ಆಯ್ಕೆ ಮಾಡ ಲಾಯಿತು. ಗೌರವಾಧ್ಯಕ್ಷರಾಗಿ ಶೇಖ್ ಅಬು ಮುಹಮ್ಮದ್, ಉಪಾಧ್ಯಕ್ಷರುಗಳಾಗಿ ಜಿ.ಸರ್ದರ್, ಮುಹಮ್ಮದ್ ಅಲಿ, ಪ್ರಧಾನ ಕಾರ್ಯದರ್ಶಿಯಾಗಿ ಆಸೀಫ್ ಮಸೂದ್, ಜತೆ ಕಾರ್ಯದರ್ಶಿಯಾಗಿ ಅಬು ಶೇಖ್, ಕೋಶಾಧಿಕಾರಿಯಾಗಿ ಕೆ.ಮುಹಮ್ಮದ್, ಜತೆ ಕೋಶಾಧಿಕಾರಿಯಾಗಿ ಮುಹಮ್ಮದ್ ರಿಯಾದ್, ಸಲಹೆಗಾರರಾಗಿ ಅಶ್ರಫ್ ಬ್ಯಾರಿ, ಆಡಿಟರ್‌ಗಳಾಗಿ ಶಾಬನ್ ಎ.ಎಚ್., ನಝೀರ್ ಮುಹಮ್ಮದ್ ಅಲಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಈ ಸಂಸ್ಥೆಯು ಸಮಾಜದಲ್ಲಿರುವ ಬಡ, ಯತೀಂ ಹಾಗೂ ನಿರ್ಗತಿಕರ ಏಳಿಗೆಗಾಗಿ 2004ರಲ್ಲಿ ಸ್ಥಾಪನೆಯಾಗಿದ್ದು, ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯ, ವೈದ್ಯಕೀಯ ನೆರವು, ಜಾತಿ ಮತ ಭೇದವಿಲ್ಲದೆ ವಿದ್ಯಾರ್ಥಿ ವೇತನ ಸಹಿತ ಹಲವು ಕಾರ್ಯಕ್ರಮಗಳನ್ನು ಕಳೆದ 17 ವರ್ಷಗಳಿಂದ ನಡೆಸುತ್ತ ಬರುತ್ತಿದೆ. ಕಳೆದ 2 ವರ್ಷದಿಂದ ಜನರ ನೆರವಿಗಾಗಿ ಕುಂದಾಪುರದ ಕೋಡಿಯಲ್ಲಿ ಸುಸಜ್ಜಿತವಾದ ಎನ್‌ಎಂಎ ಪಾಲಿಕ್ಲಿನಿಕ್‌ನ್ನು ಪ್ರಾರಂಭ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.