ವಿಧಾನಸಭಾ ಅಧಿವೇಶನದ ಅವಧಿ ವಿಸ್ತರಿಸಬೇಕು, ಹೊಸ ಬಿಲ್ ಮಂಡನೆ ಬೇಡ: ಶಾಸಕ ಯು.ಟಿ. ಖಾದರ್

Update: 2020-09-14 12:16 GMT

ಮಂಗಳೂರು, ಸೆ.14:ಎಂಟು ದಿನಗಳ ಕಾಲ ನಿಗದಿಯಾದ ವಿಧಾನ ಸಭಾ ಅಧಿವೇಶನವನ್ನು ಕನಿಷ್ಠ 10 ದಿನಗಳ ಕಾಲ ವಿಸ್ತರಿಸಬೇಕು ಹೊಸ ಬಿಲ್ ಮಂಡನೆಯನ್ನು ಮುಂದೂಡಬೇಕು ಎಂದು ಶಾಸಕ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.

ಹಾಲಿ ಅಧಿವೇಶನ ಕೇವಲ ಕಾಟಾಚಾರಕ್ಕೆ ಕರೆದಂತೆ ಕಾಣುತ್ತದೆ. ಜನರ ಗಮನವನ್ನು ಬೇರೆ ಕಡೆ ಸೆಳೆಯುವ ಪ್ರಯತ್ನ ಸರಕಾರದಿಂದ ನಡೆಯುತ್ತಿದೆ. ಈ ಅಧಿವೇಶನದಲ್ಲಿ ಭೂಮಸೂದೆ ಕಾಯಿದೆ, ಎಪಿಎಂಸಿ ತಿದ್ದುಪಡಿ ಕಾಯಿದೆಯ ಬಗ್ಗೆ ಚರ್ಚೆ ಆಗಬೇಕಾಗಿದೆ. ಈ ನಡುವೆ ಹೊಸ ಮಸೂದೆಗಳ ಮಂಡನೆಯ ಅಗತ್ಯವೇನು. ಡಗ್ಸ್ ವಿಚಾರದಲ್ಲಿ ಪಕ್ಷದ ರಾಜಕೀಯ ವಿಚಾರ ತರುವುದು ಸರಿಯಲ್ಲ. ಸೂಕ್ತ ತನಿಖೆ ನಡೆಯಲಿ. ಡಗ್ಸ್  ನಿಯಂತ್ರಣಕ್ಕೆ ಸರಕಾರ ಯಾವ ಕ್ರಮ ಕೈಗೊಂಡಿದೆ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದರು.

ಜಿಲ್ಲೆಯಲ್ಲಿ ಮರಳುಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಸೂಕ್ತ ಕ್ರಮ ಕೈಗೊಳ್ಳದೆ ಜನರಿಗೆ ತೊಂದರೆಯಾಗಿದೆ. ಇಂತಹ ವಿಷಯಗಳ ಬಗ್ಗೆ ಸರಕಾರದ ಹಂತದಲ್ಲೂ ಚರ್ಚೆ ನಡೆಯುತ್ತಿಲ್ಲ ಎಂದು ಯು.ಟಿ.ಖಾದರ್ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಕಾಂಗ್ರೆಸ್ ಮುಖಂಡರಾದ ಡಾ.ರಘು, ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News