ವಸತಿ ರಹಿತರಿಗೆ ಕಡಿಮೆ ದರದಲ್ಲಿ ಮನೆಗಳ ನಿರ್ಮಾಣ: ರಘುಪತಿ ಭಟ್

Update: 2020-09-14 14:15 GMT

ಉಡುಪಿ, ಸೆ.14: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲೆ ಇದರ ವತಿಯಿಂದ 224ನೇ ರಾಯಣ್ಣನ ಜಯಂತ್ಯೋತ್ಸವದ ಕಾರ್ಯಕ್ರಮವನ್ನು ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರವಿವಾರ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಶಾಸಕ ರಘುಪತಿ ಭಟ್ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಯಶೋಗಾಥೆಗಳು ಪಠ್ಯಪುಸ್ತಕದಲ್ಲಿ ಪ್ರಕಟವಾದರೆ ಮಕ್ಕಳ ಮನಸಿನಲ್ಲಿ ಕೂಡಾ ದೇಶ ಭಕ್ತಿಯ ಬೀಜ ಬೆಳೆಯುತ್ತದೆ. ಉಡುಪಿಯಲ್ಲಿ ಇರುವ ವಸತಿ ರಹಿತರಿಗೆ ಅತೀ ಕಡಿಮೆ ದರದಲ್ಲಿ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದರು.

ಸಮಾರಂಭವನ್ನು ಮೀನು ಮಾರಾಟ ಮಹಾಮಂಡಲದ ಅಧ್ಯಕ್ಷ ಯಶ್ ಪಾಲ್ ಸುವರ್ಣ ಉದ್ಘಾಟಸಿದರು. ಈ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್‌, ಆಶಾ ಕಾರ್ಯಕರ್ತರು, ಪತ್ರಕರ್ತರು, ಆರೋಗ್ಯ ಸಿಬ್ಬಂದಿ ಹಾಗೂ ಜನತಾ ಗ್ಯಾರೇಜ್ನ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು.

ಪತ್ರಕರ್ತ ಜನಾರ್ದನ್ ಕೊಡವೂರು, ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು, ನಗರಸಭೆಯ ಹಿರಿಯ ಅರೋಗ್ಯ ನೀರೀಕ್ಷಕ ಕರು ಣಾಕರ ವಿ., ಜಿಲ್ಲಾ ಹಾಲುಮತ ಮಹಾಸಭಾದ ಹನುಮಂತ ಜಿ.ಗೋಡೆ, ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಹನುಮಂತ ಐಹೊಳೆ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ದಯಾ ನಂದ್, ಸಂಘದ ಉಪಾಧ್ಯಕ್ಷ ಈರಪ್ಪಗೌಂಡಿ, ಬಸವರಾಜ್ ಐಹೊಳೆ, ಲಕ್ಷ್ಮಣ ಬಿ.ಕೊಲ್ಕಾರ್, ಬಸವರಾಜ್, ಉಮಾ ಎಸ್.ಚಿಕ್ಕಮಠ, ಪಂಪೇಶ್, ಶಿವು ಸಜ್ಜನ್ ಉದ್ಯಾವರ, ನಾಗಲಿಂಗಯ್ಯ ಕರಕಳ್ಳಿಮಠ, ಮಹೇಶ್ ಗುಂಡಿಬೈಲ್, ಯಮುನಪ್ಪ ಉಪಸ್ಥಿತರಿದ್ದರು.

ಬಳಗದ ಕಾರ್ಯದರ್ಶಿ ಶಿವರಾಜ್ ಗುಂಜಿ ಸ್ವಾಗತಿಸಿದರು. ಮಹಿಳಾ ವಿಭಾಗದ ಸವಿತಾ ಎಸ್.ನೋಟ್ಗಾರ್ ವಂದಿಸಿದರು. ರಮೇಶ್ ಎಲಿಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News