ದ.ಕ. ಜಿಲ್ಲೆಯಲ್ಲಿ ಸೋಮವಾರ 413 ಮಂದಿಗೆ ಕೊರೋನ ಪಾಸಿಟಿವ್

Update: 2020-09-14 15:07 GMT

ಮಂಗಳೂರು, ಸೆ.14: ದ.ಕ.ಜಿಲ್ಲೆಯಲ್ಲಿ ಸೋಮವಾರ 413 ಮಂದಿಗೆ ಕೊರೋನ ದೃಢಪಟ್ಟಿದ್ದು, 5 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತಪಟ್ಟವರ ಸಂಖ್ಯೆ 447ಕ್ಕೇರಿದೆ. ಈ ಮ್ಯೆ 297 ಮಂದಿ ಗುಣಮುಖರಾಗಿದ್ದಾರೆ.

135 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ, 185 ಮಂದಿಗೆ ಇನ್ಫ್ಲೂಯೆನ್ಝಾ ಲೈಕ್ ಇಲ್‌ನೆಸ್, ತೀವ್ರ ಉಸಿರಾಟ ತೊಂದರೆಯ 17 ಮಂದಿಯಲ್ಲಿ ಸೋಂಕು ಕಂಡುಬಂದಿದೆ.  76 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ. 137 ಮಂದಿ ಪುರುಷರು ಮತ್ತು 88 ಮಹಿಳೆಯರು ರೋಗ ಲಕ್ಷಣಗಳನ್ನು ಹೊಂದಿದ್ದಾರೆ. 96 ಮಂದಿ ಪುರುಷರು, 92 ಮಂದಿ ಮಹಿಳೆಯರು ಯಾವುದೇ ರೋಗ ಲಕ್ಷಣ ಹೊಂದಿಲ್ಲ.

ಸೋಂಕು ಪೀಡಿತರಲ್ಲಿ 169 ಮಂದಿ ಮಂಗಳೂರು, 65 ಮಂದಿ ಬಂಟ್ವಾಳ, 66 ಮಂದಿ ಪುತ್ತೂರು, 43 ಮಂದಿ ಸುಳ್ಯ, 47 ಮಂದಿ ಬೆಳ್ತಂಗಡಿ ಹಾಗೂ 23 ಮಂದಿ ಹೊರ ಜಿಲ್ಲೆಯವರಾಗಿದ್ದಾರೆ.

ಸೋಮವಾರ ಮೃತಪಟ್ಟವರಲ್ಲಿ ತಲಾ ಒಬ್ಬ ಮಂಗಳೂರು ಮತ್ತು ಬಂಟ್ವಾಳ ಹಾಗೂ ಮೂವರು ಹೊರ ಜಿಲ್ಲೆಯವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News