'ಟ್ಯಾಲೆಂಟ್ ಅಕಾಡೆಮಿಕ್ ಎಕ್ಸೆಲೆನ್ಸಿ ಅವಾರ್ಡ್ 2020' ಪ್ರದಾನ ಸಮಾರಂಭ

Update: 2020-09-14 16:42 GMT

ಮಂಗಳೂರು, ಸೆ.14: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮಂಗಳೂರು ಇದರ ವತಿಯಿಂದ “ಟ್ಯಾಲೆಂಟ್ ಅಕಾಡೆಮಿಕ್ ಎಕ್ಸಲೆನ್ಸಿ ಎವಾರ್ಡ್ 2020” ಪ್ರಶಸ್ತಿ ಪ್ರದಾನ ಹಾಗೂ 34ನೇ ಬ್ಯಾಚಿನ ಮೊಬೈಲ್ ಕೋರ್ಸ್ ಉದ್ಘಾಟನಾ ಸಮಾರಂಭವು ಟ್ಯಾಲೆಂಟ್ ಕಾನ್ಫೆರೆನ್ಸ್ ಹಾಲ್‍ನಲ್ಲಿ ಜರುಗಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಇದರ ಅಧ್ಯಕ್ಷರಾದ ಎಸ್.ಎಮ್ ರಶೀದ್ ಹಾಜಿ, "ಒಂದು ಕಾಲದಲ್ಲಿ ಶೈಕ್ಷನಿಕ ಕ್ಷೇತ್ರದಲ್ಲಿ ಬಹಳ ಹಿಂದುಳಿದಿತ್ತು. ಪ್ರಸ್ತುತ ಸನ್ನಿವೇಷದಲ್ಲಿ ಟ್ಯಾಲೆಂಟ್‍ನಂತಹ ಸಾಮಾಜಿಕ ಕಾಳಜಿಯುಳ್ಳ ಸಂಸ್ಥೆಗಳಿಂದ ನಮ್ಮ ಸಮುದಾಯ ಅದರಲ್ಲಿಯೂ ಹೆಣ್ಣು ಮಕ್ಕಳು ಬಹಳಷ್ಟು ಮುಂದುವರಿದಿದ್ದಾರೆ" ಎಂದರು. 

ಬಡತನದಲ್ಲಿ ಹುಟ್ಟಿದರೂ ಬಡತನದಲ್ಲಿ ಸಾಯಬೇಕೆಂದಿಲ್ಲ. ಕಷ್ಟಪಟ್ಟು ಕಲಿತು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬಂದು ಸಮಾಜದಲ್ಲಿ ಅತ್ಯನ್ನತ ಸ್ಥಾನವನ್ನು ಪಡೆದು ದೇಶಸೇವೆಯನ್ನು ಮಾಡಬೇಕು ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಹೇಳಿದರು.

ಎಸೆಸೆಲ್ಸಿ ವಿಭಾಗದಲ್ಲಿ ಸೈಂಟ್ ಜೋಸೆಫ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸುಳ್ಯ ಇದರ ವಿದ್ಯಾರ್ಥಿನಿ ಫಾತಿಮ ಮುಬೀನ 620 ಅಂಕ, ಸೈಂಟ್ ಅಲೋಶಿಯಸ್ ಹೈಸ್ಕೂಲ್ ಮಂಗಳೂರು ಇದರ ವಿದ್ಯಾರ್ಥಿ ನಿಯಾಫ್ ಅಹಮದ್ 614 ಅಂಕ, ಮಿಲಾಗ್ರೀಸ್ ಹೈಸ್ಕೂಲ್ ಮಂಗಳೂರು ಇದರ ವಿಧ್ಯಾರ್ಥಿ ಮುಹಮ್ಮದ್ ಝಯಾನ್ 612 ಅಂಕ, ಮುಫೀಝ ಹಿರಾ ಗಲ್ಸ್ ಹೈಸ್ಕೂಲ್ ಬಬ್ಬುಕಟ್ಟೆ, ಹಿಬಾ ಫಾತಿಮ, ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ ಪ್ರಶಸ್ತಿ ವಿಜೇತರು.

ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಮರಿಯಂ ರಫಾನ 588 ಅಂಕ, ಇವರು ಕೆ.ವಿ.ಜಿ ಅಮರ ಜ್ಯೋತಿ ಸಂಸ್ಥೆಯ ವಿದ್ಯಾರ್ಥಿನಿ, ವಿಟ್ಲ ಪದವಿ ಪೂರ್ವ ಕಾಲೇಜು ಇದರ ವಿದ್ಯಾರ್ಥಿನಿ ಮರಿಯಮತುಲ್ ಶಮ್ಲ 577 ಅಂಕ, ವಾಣಿಜ್ಯ ವಿಬಾಗದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ ಇದರ ವಿದ್ಯಾರ್ಥಿನಿ ಮುಫೀದ ಬಾನು 584 ಅಂಕ ಮತ್ತು ಹಿರಾ ವುಮೆನ್ಸ್ ಪದವಿ ಪೂರ್ವ ಕಾಲೇಜು ಬಬ್ಬುಕಟ್ಟೆ ಇದರ ವಿಧ್ಯಾರ್ಥಿನಿ ಹಲೀಮ ಝಿಕ್ರ 581 ಅಂಕ, ಕಲಾ ವಿಭಾಗದಲ್ಲಿ ಹಿರಾ ವುಮೆನ್ಸ್ ಪದವಿ ಪೂರ್ವ ಕಾಲೇಜು ಬಬ್ಬುಕಟ್ಟೆ ಇದರ ವಿದ್ಯಾರ್ಥಿನಿ ಇಫ್ರತ್ ಬಾನು 573 ಅಂಕ ಮತ್ತು 566 ಅಂಕ ಗಳಿಸಿದ ಶಾನಿಲ್ ಯಾಕೂಬ್ ಸೈಂಟ್ ಅಲೋಶಿಯಸ್ ಕಾಲೇಜಿ ವಿದ್ಯಾರ್ಥಿ ಪ್ರಶಸ್ತಿ ವಿಜೇತರು.

ಎಸೆಸೆಲ್ಸಿ ಮತ್ತು ಪಿ.ಯು.ಸಿ ಪಾಸಾದ 11 ಮಂದಿ ವಿದ್ಯಾರ್ಥಿಗಳನ್ನು ಸ್ಮರಣಿಕೆ, ಪ್ರಮಾಣ ಪತ್ರ ಮತ್ತು ನಗದು ನೀಡಿ ಗೌರವಿಸಲಾಯಿತು.  

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಿ ಅಬ್ದುಲ್ ಸಲಾಮ್ ಆಡಳಿತ ನಿರ್ದೇಕರು, ಬಿ.ಎ ಗ್ರೂಪ್ ತುಂಬೆ, ಹನೀಫ್ ಖಾನ್ ಕೋಡಾಜೆ, ನಿರ್ದೇಕರು ಪ್ರಕೃತಿ ಫೌಂಡೇಶನ್ ಮಂಗಳೂರು, ಅಬ್ದುಲ್ ಲತೀಫ್ ತುಂಬೆ ಮ್ಯಾನೇಜಿಂಗ್ ಪಾರ್ಟನರ್ ಅರಫಾ ಗ್ರೂಪ್ ತುಂಬೆ, ಲುಕ್ಮಾನ್ ಬಿ.ಸಿ ರೋಡು, ಉಪಾಧ್ಯಕ್ಷರು ಯೂತ್ ಕಾಂಗ್ರೆಸ್ ದ.ಕ, ಸುಲೈಮಾನ್ ಶೇಖ್, ಅಧ್ಯಕ್ಷರು ಖಲಂದರ್ ಚಾರಿಟೇಬಲ್ ಟ್ರಸ್ಟ್ ಬೆಳುವಾಯಿ ಮತ್ತು ರಫೀಕ್ ಮಾಸ್ಟರ್ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು. ಮಜೀದ್ ತುಂಬೆ ಪ್ರಾಸ್ತಾವಿಕ ಭಾಷಣ ಮಾಡಿದರು.  ನಕಾಶ್ ಬಾಂಬಿಲ ಧನ್ಯವಾದಗೈದರು.  ಮುಹಮ್ಮದ್ ಯು.ಬಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ವಿಗೆ ಹಕೀಮ್ ಬಜಾಲ್ ಮತ್ತು ಟ್ಯಾಲೆಂಟ್ ಎಲ್ಲಾ ಕಾರ್ಯಕರ್ತರು ಸಹಕರಿಸಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News