×
Ad

​ಕದ್ರಿ: ಮನೆಯಿಂದ ಚಿನ್ನಾಭರಣ ಕಳವು

Update: 2020-09-14 22:10 IST

ಮಂಗಳೂರು, ಸೆ.14:ನಗರದ ಕದ್ರಿ ಶಿವಭಾಗ್‌ನ ತಾರೆತೋಟ ಎಂಬಲ್ಲಿನ ಮನೆಯೊಂದರಿಂದ ಚಿನ್ನಾಭರಣ ಕಳವುಗೈದ ಘಟನೆ ಸೋಮವಾರ ಮಧ್ಯಾಹ್ನ 1:50ರಿಂದ ಸಂಜೆ 4ರ ಮಧ್ಯೆ ನಡೆದಿದೆ.

ಕಿಮೆ ನಾಯ್ಕ ಎಂಬವರ ಪತ್ನಿ ರೂಪಾ ತನ್ನ ಮಕ್ಕಳೊಂದಿಗೆ ಸೋಮವಾರ ಮನೆಯ ಬೀಗ ಹಾಕಿ ಮಕ್ಕಳ ಬಟ್ಟೆಯನ್ನು ಹೊಲಿಸಲು ತಾರೆತೋಟಕ್ಕೆ ಹೋಗಿ ಸಂಜೆ 4ಗಂಟೆಗೆ ಮರಳಿ ಬಂದಾಗ ಮನೆಯ ಎದುರಿನ ಬೀಗವು ತೆರೆದ ಸ್ಥಿತಿಯಲ್ಲಿತ್ತು. ಈ ಬಗ್ಗೆ ಅನುಮಾನಗೊಂಡ ಅವರು ಮನೆಯೊಳಗೆ ಹೋಗಿ ಕಪಾಟು ತೆರೆದು ನೋಡಿದಾಗ ಬಟ್ಟೆ-ಬರೆಗಳು ಚೆಲ್ಲಾಪಿಲ್ಲಿ ಆಗಿದ್ದು, ಕಪಾಟಿನ ಲಾಕರ್ ತೆರೆದು 44 ಗ್ರಾಂ ತೂಕದ ಚಿನ್ನದ ಕರಿಮಣಿ ಸರ-1, ಕಿವಿಯೋಲೆ -1 ಜೊತೆ, ನಗದು 18,000 ರೂ. ಸಹಿತ 1.78 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ.

ಈ ಬಗ್ಗೆ ರೂಪಾ ಎಂಬವರು ನೀಡಿದ ದೂರಿನಂತೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News