ಉಡುಪಿ: ಸುರಕ್ಷತಾ ಕ್ರಮದೊಂದಿಗೆ ಗ್ರಂಥಾಲಯ ಸೇವೆ ಆರಂಭ
Update: 2020-09-14 22:16 IST
ಉಡುಪಿ, ಸೆ.14: ಸರಕಾರದ ಆದೇಶದ ಮೇರೆಗೆ ಸೆ.12ರಿಂದ ಕೆಎಂ ಮಾರ್ಗ ದಲ್ಲಿರುವ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಶಾಖೆ ಹಾಗೂ ಇದರ ವ್ಯಾಪ್ತಿಯಲ್ಲಿ ಬರುವ ಶಾಖಾ ಗ್ರಂಥಾಲಯಗಳಲ್ಲಿ ಗ್ರಂಥಾಲಯ ಸೇವೆಯನ್ನು ಸಾರ್ವಜನಿಕ ಓದುಗರಿಗೆ ಸುರಕ್ಷತಾ ಕ್ರಮಗಳೊಂದಿಗೆ ಪುನಃ ಪ್ರಾರಂಭಿಸಲಾಗಿದೆ ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.