ಉಡುಪಿ: ಮುದ್ದುಕೃಷ್ಣ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ

Update: 2020-09-14 16:54 GMT

ಉಡುಪಿ, ಸೆ.14: ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನದ ಆಶ್ರಯದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಷಿಯೇಶನ್ ಉಡುಪಿ ವಲಯ ಮತ್ತು ಸುಮನಾ ಕೊಡವೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಮುದ್ದುಕೃಷ್ಣ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಇತ್ತೀಚೆಗೆ ಜರಗಿತು.

ಮುಖ್ಯ ಅತಿಥಿಗಳಾಗಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಉಡುಪಿ ಶಾಖೆಯ ಮುಖ್ಯಸ್ಥ ಹಫೀಜ್ ರಹೆಮಾನ್, ಎಸ್‌ಕೆಪಿಎ ಜಿಲ್ಲಾಧ್ಯಕ್ಷ ಕರಂಡಾಡಿ ಶ್ರೀಧರ್ ಶೆಟ್ಟಿಗಾರ್ ಮಾತನಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿಜೇತರಿಗೆ ನಗದು ಹಾಗು ಉಡುಗೊರೆಯನ್ನು ನೀಡಲಾಯಿತು. ಬಹುಮಾನಿತ ಮಕ್ಕಳ ಫೋಟೋಗಳನ್ನು ತೆಗೆದ ಛಾಯಾಚಿತ್ರಗಾರರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ಕೆಪಿಎ ಜಿಲ್ಲಾ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು, ವಲಯ ಗೌರವಾಧ್ಯಕ್ಷ ಶಿವ ಅಮೀನ್, ಸುಮನಸಾ ಕಾರ್ಯದರ್ಶಿ ಜೀವನ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಸುಕೇಶ್ ಅಮೀನ್ ಸ್ವಾಗತಿಸಿದರು. ವಲಯಾಧ್ಯಕ್ಷ ಪ್ರಕಾಶ್ ಎಸ್.ಕೊಡಂಕೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ಜನಾರ್ದನ್ ವಂದಿಸಿದರು. ರಾಘವೇಂದ್ರ ಸೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News