ಡಿಜಿಟಲ್ ಗ್ರಂಥಾಲಯಗಳ ಕುರಿತು ರಾಷ್ಟ್ರಮಟ್ಟದ ಆನ್‌ಲೈನ್ ಕಾರ್ಯಾಗಾರ
ಉಡುಪಿ, ಸೆ.14: ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಆನ್‌ಲೈನ್ ಡಿಜಿಟಲ್ ಗ್ರಂಥಾಲಯಗಳ ಪಾತ್ರ ಎಂಬ ವಿಷಯದ ಕುರಿತು ರಾಷ್ಟ್ರಮಟ್ಟ ಆನ್‌ಲೈನ್ ಕಾರ್ಯಾಗಾರ ನಡೆಯಿತು.
ಇದರಲ್ಲಿ ಒಟ್ಟು 18 ರಾಜ್ಯಗಳಿಂದ 80 ಮಂದಿ ಹಾಗೂ ಕರ್ನಾಟಕದಿಂದ 508 ಮಂದಿ ಸಹಿತ ಒಟ್ಟು 588 ಮಂದಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಕುಮಟಾ ಡಾ.ಎ.ವಿ.ಬಾಳಿಗಾ ಕಾಲೇಜಿನ ಹಿರಿಯ ಗ್ರಂಥಪಾಲಕ ಶಿವಾನಂದ ಬುಳ್ಳ, ಡಿಜಿಟಲ್ ಗ್ರಂಥಾಲಯ ಮಹತ್ವ ಹಾಗೂ ಅದರ ಬಳಕೆ ಯನ್ನು ವಿವರವಾಗಿ ತಿಳಿಸಿದರು.
ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥೆ ಯಶೋಧಾ ಕಾರ್ಯಕ್ರಮ ಸಂಯೋಜಿಸಿ ಸ್ವಾಗತಿಸಿದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಕೇಶವಮೂರ್ತಿ ಅತಿಥಿಯನ್ನು ಪರಿಚಯಿಸಿದರು. ಐಕ್ಯೂಎಸಿ ಸಂಚಾಲಕ ಸೋಜನ್ ಕೆ.ಜಿ. ವಂದಿಸಿ ದರು.