ಜಪಾನ್: ನೂತನ ಪ್ರಧಾನಿಯಾಗಿ ಯೊಶಿಹಿಡೆ ಸುಗ ಆಯ್ಕೆ

Update: 2020-09-14 17:58 GMT

ಟೋಕಿಯೊ (ಜಪಾನ್), ಸೆ. 14: ಜಪಾನ್‌ನ ಆಡಳಿತಾರೂಢ ಪಕ್ಷವು ಸೋಮವಾರ ಮುಖ್ಯ ಸಂಪುಟ ಕಾರ್ಯದರ್ಶಿ ಯೊಶಿಹಿಡೆ ಸುಗ ಅವರನ್ನು ತನ್ನ ನೂತನ ನಾಯಕನಾಗಿ ಆರಿಸಿದೆ. ಇದರೊಂದಿಗೆ ಅವರು ಶಿಂರೊ ಅಬೆ ಸ್ಥಾನದಲ್ಲಿ ದೇಶದ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ.

ಸೋಮವಾರ ನಡೆದ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಸಂಸದರು ಮತ್ತು ಪ್ರಾದೇಶಿಕ ಪ್ರತಿನಿಧಿಗಳ ಮತದಾನದಲ್ಲಿ, ಚಲಾವಣೆಯಾದ 534 ಸಿಂಧು ಮತಗಳ ಪೈಕಿ ಸುಗ 377 ಮತಗಳನ್ನು ಪಡೆದು ಸ್ಪರ್ಧೆಯಲ್ಲಿ ಸುಲಭ ಜಯ ಸಾಧಿಸಿದರು. ಅವರು ತನ್ನ ಎದುರಾಳಿಗಳಾದ ಮಾಜಿ ರಕ್ಷಣಾ ಸಚಿವ ಶಿಗೆರು ಇಶಿಬ ಮಠಿತ್ತು ಎಲ್‌ಡಿಪಿ ನೀತಿ ನಿರೂಪಣಾ ಮುಖ್ಯಸ್ಥ ಫುಮಿಯೊ ಕಿಶಿಡರನ್ನು ಸೋಲಿಸಿದರು.

ಬುಧವಾರ ಸಂಸತ್ತಿನಲ್ಲಿ ನಡೆಯುವ ಮತದಾನದಲ್ಲಿ ಅವರು ಪ್ರಧಾನಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಸಂಸತ್ತಿನಲ್ಲಿ ಅವರ ಪಕ್ಷವು ಬಹುಮತವನ್ನು ಹೊಂದಿದೆ.

ಶಿಂರೊ ಅಬೆ ಆರೋಗ್ಯ ಕಾರಣಗಳಿಗಾಗಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News