ಎಸ್ಸೆಸ್ಸೆಫ್ ಉಪ್ಪಿನಂಗಡಿ ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರ

Update: 2020-09-14 18:01 GMT

ಉಪ್ಪಿನಂಗಡಿ: ರಕ್ತದಾನ ಎಂದರೆ ಜೀವದಾನವೇ ಸರಿ. ರಕ್ತದಾನ ಮಾಡುವ ಮೂಲಕ ಇನ್ನೊಬ್ಬರಿಗೆ ಜೀವರಕ್ಷಣೆ ಹಾಗೂ ಬದುಕನ್ನು ಎಸ್ಸೆಸ್ಸೆಫ್ ನೀಡುತ್ತಿದೆ. ಇದು ಇಡೀ ರಾಜ್ಯಕ್ಕೆ ಹಾಗೂ ಯುವ ಸಂಘಟನೆಗಳಿಗೆ ಮಾದರಿಯಾಗಿದೆ. ಎಸ್ಸೆಸ್ಸೆಫ್ ಬ್ಲಡ್ ಸೈಬೋ ಇದರ ಯೋಜಿತ 200 ನೇ ಬ್ಲಡ್ ಕ್ಯಾಂಪ್ ನಮ್ಮ ಅವಧಿಯಲ್ಲೇ ನಡೆಯಲಿ ಎಂದು ಪುತ್ತೂರು ವಿಧಾನಸಭಾ ಶಾಸಕ ಶ್ರೀ ಸಂಜೀವ ಮಠಂದೂರು ತಿಳಿಸಿದರು. 

ಎಸ್ಸೆಸ್ಸೆಫ್ ಉಪ್ಪಿನಂಗಡಿ ಸೆಕ್ಟರ್ ವತಿಯಿಂದ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಯೋಗದಲ್ಲಿ ರವಿವಾರ ತಾಜುಲ್ ಉಲಮಾ ಎಜುಕೇಶನಲ್ ಸೆಂಟರ್ ಕರುವೇಲಿನಲ್ಲಿ ನಡೆದ ಎಸ್ಸೆಸ್ಸೆಫ್ ದ.ಕ ಬ್ಲಡ್ ಸೈಬೋ ಇದರ 181 ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ಸೆಸ್ಸೆಫ್ ಕೋಶಾಧಿಕಾರಿ ಅಲೀ ತುರ್ಕಳಿಕ್ಕೆ ಪ್ರಸ್ತಾವಿಕವಾಗಿ ಮಾತನಾಡಿ, ಪ್ರಸಕ್ತ ರಕ್ತದ ಅವಶ್ಯಕತೆ ಹಾಗೂ ಎಸ್ಸೆಸ್ಸೆಫ್ ತುರ್ತು ಸೇವೆಯನ್ನು ವಿವರಿಸಿದರು. ಎಸ್ಸೆಸ್ಸೆಫ್ ಉಪ್ಪಿನಂಗಡಿ ಸೆಕ್ಟರ್ ಅಧ್ಯಕ್ಷ ಹಾರಿಸ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಸಾದಾತ್ ತಂಙಳ್ ಕರುವೇಲು, ಮುಹಮ್ಮದ್ ಮಿಸ್ಬಾಹಿ, ಇಸಾಕ್ ಮದನಿ, ಹಮೀದ್ ಕರುವೇಲು, ಮುಸ್ತಫಾ ಯು.ಪಿ, ಹಕೀಂ ಕಳಂಜಿಬೈಲು,ಶಫೀಕ್ ಮಾಸ್ಟರ್, ಇಮ್ರಾನ್ ರೆಂಜಲಾಡಿ, ಸಿರಾಜ್ ಆತೂರು ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಎಂ.ಎಂ ಮಹ್ ರೂಫ್ ಆತೂರು ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News