ಕೊರೋನ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಬಾರತ ದಾಖಲೆಯ ಏರಿಕೆ

Update: 2020-09-14 18:02 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಸೆ. 14: ಜಾಗತಿಕ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ರವಿವಾರ ದಾಖಲೆಯ ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ 24 ಗಂಟೆಗಳ ಅವಧಿಯಲ್ಲಿ 3,07,930 ಹೊಸ ಪ್ರಕರಣಗಳು ವರದಿಯಾಗಿವೆ.

ಅತಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಭಾರತ, ಅಮೆರಿಕ ಮತ್ತು ಬ್ರೆಝಿಲ್‌ಗಳಿಂದ ವರದಿಯಾಗಿವೆ ಎಂದು ಸಂಸ್ಥೆಯ ವೆಬ್‌ಸೈಟ್ ತಿಳಿಸಿದೆ. ಇದೇ ಅವಧಿಯಲ್ಲಿ 5,537 ಸಾವುಗಳು ಸಂಭವಿಸಿದ್ದು, ಸಾವಿನ ಒಟ್ಟು ಸಂಖ್ಯೆಯು 9,17,417ನ್ನು ತಲುಪಿದೆ.

ಭಾರತದಲ್ಲಿ 24 ಗಂಟೆಗಳ ಅವಧಿಯಲ್ಲಿ 94,372 ಹೊಸ ಪ್ರಕರಣಗಳು ವರದಿಯಾದರೆ, ನಂತರದ ಸ್ಥಾನಗಳಲ್ಲಿರುವ ಅಮೆರಿಕದಲ್ಲಿ 45,523 ಮತ್ತು ಬ್ರೆಝಿಲ್‌ನಲ್ಲಿ 43,718 ಸೋಂಕು ಪ್ರಕರಣಗಳು ಸಂಭವಿಸಿವೆ.

ಕಳೆದ 24 ಗಂಟೆಗಳಲ್ಲಿ ಭಾರತ ಮತ್ತು ಅಮೆರಿಕಗಳಲ್ಲಿ ತಲಾ 1,000ಕ್ಕೂ ಅಧಿಕ ಸಾವುಗಳು ಸಂಭವಿಸಿದರೆ, ಬ್ರೆಝಿಲ್‌ನಲ್ಲಿ 874 ಮಂದಿ ಸಾವಿಗೀಡಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News