ಭಟ್ಕಳ ಎಎಸ್ಪಿ ನಿಖಿಲ್ ಬುಳ್ಳಾವರ್ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ: ಹಣಕ್ಕಾಗಿ ಬೇಡಿಕೆ
Update: 2020-09-14 23:35 IST
ಭಟ್ಕಳ: ಭಟ್ಕಳ ಉಪವಿಭಾಗದ ಎಎಸ್ಪಿ ನಿಖಿಲ್ ಬುಳ್ಳಾವರ್ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆಯೊಂದನ್ನು ತೆರೆದು ನಿಖಿಲ್ ಅವರ ಹೆಸರಲ್ಲಿ ಫೇಸ್ಬುಕ್ ನಲ್ಲಿ ಹಣ ಕೇಳುತ್ತಿರುವುದಾಗಿ ಸ್ವತಃ ಎಎಸ್ಪಿ ನಿಖಿಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ನಕಲಿ ಖಾತೆಗೆ ಯಾರು ಕೂಡ ಪ್ರತಿಕ್ರಿಯೆ ನೀಡದಿರಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಕುಮಟಾ ಪೊಲೀಸ್ ಠಾಣೆಯ ಪಿಎಸ್‌ಐ ಹೆಸರಲ್ಲಿ ಇದೇ ರೀತಿಯ ನಕಲಿ ಫೇಸ್ಬುಕ್ ಖಾತೆ ತೆರೆದು ಹಣ ಬೇಡುತ್ತಿರುವ ಘಟನೆ ಮಾಸುವ ಮುನ್ನವೇ ಇಂದು ಮತ್ತೊಂದು ಅದೇ ರೀತಿಯ ಘಟನೆ ವರದಿಯಾಗಿದೆ.