×
Ad

ರೆ.ಫಾ.ಪೀಟರ್ ಪಾವ್ಲ್ ಸಲ್ಡಾನ ಮಂಗಳೂರು ಬಿಷಪ್ ಆಗಿ 2 ವರ್ಷ: ಬಿಷಪ್ ಹೌಸ್‌ನಲ್ಲಿ ವಿಶೇಷ ಬಲಿಪೂಜೆ

Update: 2020-09-15 11:06 IST

ಮಂಗಳೂರು, ಸೆ.15: ಮಂಗಳೂರು ಕ್ರೈಸ್ತ ಧರ್ಮಪ್ರಾಂತ ಧರ್ಮಾಧ್ಯಕ್ಷರಾಗಿ ರೆ.ಫಾ.ಪೀಟರ್ ಪಾವ್ಲ್ ಸಲ್ಡಾನ ಅಧಿಕಾರ ಸ್ವೀಕರಿಸಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಬಿಷಪ್ ಹೌಸ್ ನಲ್ಲಿ ವಿಶೇಷ ಕೃತಜ್ಞತಾ ಬಲಿಪೂಜೆ ನಡೆಯಿತು.

ವಿಶೇಷ ಕೃತಜ್ಞತಾ ಬಲಿಪೂಜೆ ನೆರವೇರಿಸಿದ ಬಳಿಕ ಬಿಷಪ್ ರೆ.ಫಾ.ಪೀಟರ್ ಪಾವ್ಲ್ ಸಲ್ಡಾನ ಧಾರ್ಮಿಕ ಸಂದೇಶ ನೀಡಿದರು. ನಿಕಟಪೂರ್ವ ಬಿಪಷ್ ಡಾ.ಅಲೋಶಿಯಸ್ ಪೌಲ್ ಡಿಸೋಜ, ಶ್ರೇಷ್ಠ ಧರ್ಮಗುರು ಮ್ಯಾಕ್ಸಿಮ್ ನೊರೊನ್ಹ, ಬಿಷಪ್ ಹೌಸ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ರೆ.ಫಾ. ವಿಕ್ಟರ್ ಲೋಬೋ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News