ಆನ್‍ಲೈನ್ ತರಗತಿ ವೇಳೆ ಹರಿದಾಡಿದ ಅಶ್ಲೀಲ ಚಿತ್ರ; ಕ್ಲಾಸ್ ಸ್ಥಗಿತ

Update: 2020-09-15 07:53 GMT
ಸಾಂದರ್ಭಿಕ ಚಿತ್ರ

ಭೋಪಾಲ್: ಭೋಪಾಲ್ ನಗರದ ಶಿಯೋಪುರ್ ಎಂಬಲ್ಲಿ ಆನ್ ಲೈನ್ ತರಗತಿಯೊಂದು ನಡೆಯುತ್ತಿರುವಾಗಲೇ ಶಾಲೆಯ ವಾಟ್ಸ್ ಆ್ಯಪ್ ಗ್ರೂಪಿನಲ್ಲಿ  ಅಶ್ಲೀಲ ಚಿತ್ರವೊಂದು ಹರಿದಾಡಿದ ನಂತರ ಆನ್‍ಲೈನ್ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.

ಘಟನೆ ಕಳೆದ ಶನಿವಾರ ನಡೆದಿತ್ತು. ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಾಠವನ್ನು ನಡೆಸುತ್ತಿದ್ದಾಗ ಅಶ್ಲೀಲ ಚಿತ್ರವೊಂದು ಎಲ್ಲರ ಮೊಬೈಲ್ ಫೋನ್‍ಗಳಲ್ಲಿ ಕಾಣಿಸಿದಾಗ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಆಘಾತವಾಗಿತ್ತು. ಹೆತ್ತವರಂತೂ ಇನ್ನಷ್ಟು ಆಕ್ರೋಶಕ್ಕೀಡಾಗಿದ್ದು ತಕ್ಷಣ ಶಾಲಾಡಳಿತಕ್ಕೆ ಕರೆ ಮಾಡಿ ತಮ್ಮ ಸಿಟ್ಟನ್ನು ಹೊರಗೆಡಹಿದ್ದಾರೆ.

ಘಟನೆ ನಡೆದ ಬೆನ್ನಿಗೇ ಎಲ್ಲಾ ಆನ್‍ಲೈನ್ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಈ ನಿರ್ದಿಷ್ಟ ಶಾಲೆಯ ಹೆಚ್ಚಿನ ವಿದ್ಯಾರ್ಥಿಗಳು ಸರಕಾರಿ ಅಧಿಕಾರಿಗಳ ಹಾಗೂ ಉದ್ಯಮಿಗಳ ಮಕ್ಕಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News