ಮಾಸ್ಕ್ ಧರಿಸದವರಿಗೆ ಇಲ್ಲಿ ಗೋರಿಗೆ ಗುಂಡಿ ಅಗೆಯುವ ಶಿಕ್ಷೆ!

Update: 2020-09-15 10:44 GMT
ಸಾಂದರ್ಭಿಕ ಚಿತ್ರ

ಜಕಾರ್ತ: ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಇರುವ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರಿಗೆ ಪೂರ್ವ ಜಾವಾದ ಸ್ಥಳೀಯಾಡಳಿದ ಅಧಿಕಾರಿಗಳು ವಿಶಿಷ್ಟ ಶಿಕ್ಷೆಯನ್ನು ನೀಡಲು ಆರಂಭಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಪೂರ್ವ ಜಾವಾದ ಗ್ರೆಸಿಕ್ ರೀಜನ್ಸಿಯ ಎಂಟು ಮಂದಿಗೆ ಅಲ್ಲಿನ ಅಧಿಕಾರಿಗಳು ನಗಬೆಟನ್ ಗ್ರಾಮದ ಸಾರ್ವಜನಿಕ ದಫನಭೂಮಿಯಲ್ಲಿ ಗೋರಿಗಳಿಗೆ ಗುಂಡಿ ಅಗೆಯುವ ಕೆಲಸವನ್ನು ವಹಿಸಿದ್ದಾರೆ.

ಈ ಗ್ರಾಮದಲ್ಲಿ  ಸಮಾಧಿಗೆ ಗುಂಡಿ ಅಗೆಯುವ ಕೇವಲ ಮೂರು ಮಂದಿ ಮಾತ್ರ ಇದ್ದಾರೆ, ಇದೇ ಕಾರಣದಿಂದ ನಿಯಮ ಉಲ್ಲಂಘಿಸಿದ ಈ ಮಂದಿಗೂ ಈ ಕೆಲಸ ವಹಿಸಲು ನಿರ್ಧರಿಸಿದೆ ಎಂದು  ಸ್ಥಳೀಯಾಡಳಿತದ ಮುಖ್ಯಸ್ಥ ಸುಯೊನೊ ಹೇಳಿದ್ದಾರೆ.

ಇಂತಹ ಕೆಲಸ ವಹಿಸುವ ಮೂಲಕ ಜನರು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸದಂತೆ ನೋಡಿಕೊಳ್ಳಬಹುದೆಂಬ ಆಶಾಭಾವವಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News