ಪ್ರಮೋದನ ಯು.ಗೆ ಪಿಎಚ್‌ಡಿ ಪದವಿ

Update: 2020-09-15 13:28 GMT

ಉಡುಪಿ, ಸೆ. 15: ಉಡುಪಿಯ ಪ್ರಮೋದನ ಯು. ಇವರು ಬರೆದ ‘ದ ಇನ್‌ಫ್ಲೊಯೆನ್ಸ್ ಆಫ್ ಡಿಸೈನ್ ಇನ್ ದ ಫೀಲ್ಡ್ ಆಫ್ ಕಾಮರ್ಸ್’ ಎಂಬ ವಿಷಯದ ಕುರಿತಾದ ಸಂಶೋಧನಾ ಪ್ರಬಂಧಕ್ಕೆ ಅಮೆರಿಕ ಫ್ಲೋರಿಡಾದ ಯೋಗ ಯೂನಿವರ್ಸಿಟಿ ಆಫ್ ದಿ ಅಮೇರಿಕಾಸ್ ಡಾಕ್ಟರೇಟ್ ಪದವಿ ನೀಡಿದೆ.

ಪ್ರಮೋದನ ಇವರು ಬೆಂಗಳೂರಿನ ಡಾ.ವಾದಿರಾಜು ಇವರ ಮಾರ್ಗದರ್ಶನ ದಲ್ಲಿ ಪ್ರಬಂಧವನ್ನು ಮಂಡಿಸಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂವಿಎ ಪದವಿಯಲ್ಲಿ ರ್ಯಾಂಕ್ ಪಡೆದಿರುವ ಇವರು ಚಿತ್ರಕಲೆಯ ಸಾಧನೆಗಾಗಿ ಕ್ಯಾಮ್ಲಿನ್ ನ್ಯಾಶನಲ್ ಅವಾರ್ಡ್, ಚಿತ್ರಕಲಾ ಪರಿಷತ್ ಅವಾರ್ಡ್‌ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರು ಮೂಡಬಿದರೆ ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿ ಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News