ಉಡುಪಿ: ಸರಕಾರಿ ವೈದ್ಯಾಧಿಕಾರಿಗಳ ಮೊದಲ ಹಂತದ ಮುಷ್ಕರ ಆರಂಭ

Update: 2020-09-15 14:47 GMT

ಉಡುಪಿ, ಸೆ.15: ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಕರೆ ಯಂತೆ ಜಿಲ್ಲೆಯ ಸರಕಾರಿ ವೈದ್ಯಾಧಿಕಾರಿಗಳು ಮೊದಲ ಹಂತವಾಗಿ ಇಂದಿನಿಂದ ಆನ್‌ಲೈನ್ ಸಹಿತ ಎಲ್ಲ ಸರಕಾರಿ ಸಭೆಗಳಿಂದ ದೂರು ಉಳಿದು, ಕೋವಿಡ್- 19 ಸಹಿತ ಎಲ್ಲ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ವರದಿ ಗಳನ್ನು ಸರಕಾರಕ್ಕೆ ನೀಡದೆ ಮುಷ್ಕರ ಆರಂಭಿಸಿದ್ದಾರೆ.

ಕೇಂದ್ರ ಸರಕಾರದ ಆರೋಗ್ಯ ಯೋಜನೆ ಮಾದರಿಯಲ್ಲಿ ವೇತನ ಪರಿಷ್ಕರಣೆ ಹಾಗೂ ಇನ್ನಿತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸರಕಾರ ಸ್ಪಂದಿಸದ ಕಾರಣ ಈ ಹೋರಾಟ ಆರಂಭಿಸಲಾಗಿದೆ. ಇಂದಿನಿಂದ ಡಿಎಚ್‌ಓ, ಜಿಲ್ಲಾ ಸರ್ಜನ್ ಸೇರಿದಂತೆ ಜಿಲ್ಲೆಯ ಒಟ್ಟು 115 ಮಂದಿ ವೈದ್ಯಾಧಿಕಾರಿಗಳು ಆನ್‌ಲೈನ್ ಸಹಿತ ಎಲ್ಲ ಸರಕಾರಿ ಸಭೆಗಳಲ್ಲಿ ಭಾಗವಹಿಸದೆ, ಕೋವಿಡ್- 19 ಸಹಿತ ಎಲ್ಲ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ವರದಿಗಳನ್ನು ಸರಕಾರಕ್ಕೆ ನೀಡುತ್ತಿಲ್ಲ. ಆದರೆ ಸಾರ್ವಜನಿಕ ಹಾಗೂ ಬಡರೋಗಿಗಳ ಹಿತದೃಷ್ಟಿಯಿಂದ ಕರ್ತವ್ಯಕ್ಕೆ ಹಾಜರಾಗಿ ಆರೋಗ್ಯ ಸೇವೆಯನ್ನು ಮುಂದುವರೆಸುತ್ತಿದ್ದೇವೆ ಎಂದು ಸಂಘದ ಉಡುಪಿ ಜಿಲ್ಲಾಧ್ಯಕ್ಷ ಡಾ.ಎಚ್.ಪ್ರಕಾಶ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News