ಉಡುಪಿ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಆಗ್ರಹಿಸಿ ಮನವಿ

Update: 2020-09-15 14:48 GMT

ಉಡುಪಿ, ಸೆ.15: ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿ ಸುವಂತೆ ಆಗ್ರಹಿಸಿ ಯುವ ಶಕ್ತಿ ಕರ್ನಾಟಕ ಸಂಘಟನೆ ಸೆ.11ರಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದೆ.

ಉಡುಪಿ ಜಿಲ್ಲೆಯು ದ.ಕ. ಜಿಲ್ಲೆಯಿಂದ ಬೇರ್ಪಟ್ಟು ಹಲವು ವರ್ಷಗಳಾ ದರೂ ಈವರೆಗೆ ಜಿಲ್ಲೆಯ ಜನತೆಗೆ ಅತಿಮುಖ್ಯವಾಗಿ ಬೇಕಾಗಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯು ಕೇವಲ ನಾಮಫಲಕದಲ್ಲಿ ಮಾತ್ರ ಜಿಲ್ಲಾಸ್ಪತ್ರೆಯಾಗಿ ಉಳಿದಿದೆ. ಉಳಿದಂತೆ ಹಳೆ ಕಾಲದ ಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಜನಪ್ರತಿನಿಧಿಗಳು ಹಲವು ವರ್ಷಗಳಿಂದ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಭರವಸೆ ನೀಡಿದ್ದಾರೆಯೇ ಹೊರತು ಈವರೆಗೆ ನಿಜವಾದ ಮುತು ವರ್ಜಿ ತೋರಿಸಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಇಂದು ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಬಡವರು ಮತ್ತು ಮಧ್ಯಮವರ್ಗದವರು ಸಾಲ ಮಾಡಿಕೊಂಡು ಖಾಸಗಿ ಆಸ್ಪತ್ರೆ ಯನ್ನು ಅವಲಂಬಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಕೋವಿಡ್-19ನಿಂದ ಪ್ರತಿಯೊಬ್ಬರಿಗೆ ಸರಕಾರಿ ಆಸ್ಪತ್ರೆ. ವೌಲ್ಯ ಮತ್ತು ಅನಿರ್ವಾಯತೆಯ ಬಗ್ಗೆ ಅರಿವು ಮೂಡಿದೆ. ಆದುದರಿಂದ ಜಿಲ್ಲಾಸ್ಪತ್ರೆಯನ್ನು ತಕ್ಷಣ ಮೇಲ್ದರ್ಜೆಗೇರಿಸಿ, ಆಧುನಿಕ ಕಟ್ಟಡ ನಿರ್ಮಿಸಿ, ಎಲ್ಲ ರೀತಿಯ ವ್ಯವಸ್ಥೆ ಮತ್ತು ತಜ್ಞ ವೈದ್ಯರುಗಳನ್ನು ನೇಮಕ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಯುವಶಕ್ತಿ ಕರ್ನಾಟಕ ರಾಜ್ಯಾಧ್ಯಕ್ಷ ಪ್ರಮೋದ್ ಉಚ್ಚಿಲ್, ಪದಾಧಿಕಾರಿಗಳಾದ ಹಬೀಬ್ ಉಡುಪಿ, ಬೆಳ್ಕೆಲೆ ಶರತ್ ಶೆಟ್ಟಿ, ಶಾಹಿದ್ ರಝಾ, ವಿಕ್ಕಿ ಕ್ರಿಸ್ಟೋಪರ್, ಅಜಯ್ ಕುಮಾರ್, ಇಮ್ರಾನ್ ಕರಂಬಳ್ಳಿ, ಸಜ್ಜನ್ ಶೆಟ್ಟಿ ಸಿದ್ಧಾರ್ಥ್ ಮೊದಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News