ಭಾರತವು ಸಾರ್ವಭೌಮತೆಯ ವಿಷಯಗಳಲ್ಲಿ ಅತ್ಯಂತ ಗಂಭೀರ ನಿಲುವು ಹೊಂದಿದೆ: ಚೀನಾಕ್ಕೆ ಎಚ್ಚರಿಕೆ ನೀಡಿದ ರಾಜನಾಥ್ ಸಿಂಗ್

Update: 2020-09-15 16:22 GMT

ಹೊಸದಿಲ್ಲಿ,ಸೆ.15: ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ಪದೇ ಪದೇ ಅತಿಕ್ರಮಣಗಳ ನಡುವೆಯೇ ಮಂಗಳವಾರ ಸಂಸತ್ತಿನಲ್ಲಿ ಚೀನಾಕ್ಕೆ ಕಟು ಎಚ್ಚರಿಕೆಯನ್ನು ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು,ಭಾರತವು ಸಾರ್ವಭೌಮತೆಯ ವಿಷಯಗಳಲ್ಲಿ ಅತ್ಯಂತ ಗಂಭೀರ ನಿಲುವನ್ನು ಹೊಂದಿದೆ ಮತ್ತು ಅದನ್ನು ಕಾಯ್ದುಕೊಳ್ಳಲು ಎಲ್ಲ ಸಂದರ್ಭಗಳಿಗೂ ಸನ್ನದ್ಧವಾಗಿದೆ ಎಂದು ಹೇಳಿದರು.

ಇತ್ತೀಚಿಗೆ ಮಾಸ್ಕೋದಲ್ಲಿ ತನ್ನ ಮತ್ತು ಚೀನಾದ ರಕ್ಷಣಾ ಸಚಿವರ ನಡುವಿನ ಮಹತ್ವದ ಮಾತುಕತೆಗಳ ವಿವರಗಳನ್ನು ನೀಡಿದ ಸಿಂಗ್, ಗಡಿ ಸಮಸ್ಯೆಯನ್ನು ಶಾಂತಿಯುತ ರೀತಿಯಲ್ಲಿ ಬಗೆಹರಿಸಲು ಮತ್ತು ಚೀನಾ ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಭಾರತವು ಬಯಸುತ್ತದೆ ಎಂದು ತಾನು ಸ್ಪಷ್ಟಪಡಿಸಿದ್ದೇನೆ. ಆದರೆ ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಅಖಂಡತೆಯನ್ನು ರಕ್ಷಿಸುವ ನಮ್ಮ ದೃಢ ಸಂಕಲ್ಪದ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಹೇಳಿದರು. ಮಾಸ್ಕೋದಲ್ಲಿ ಚೀನಿ ವಿದೇಶಾಂಗ ಸಚಿವರ ಜೊತೆ ಮಾತುಕತೆ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೂ ಇದೇ ನಿಲುವನ್ನು ಪ್ರಕಟಿಸಿದ್ದಾರೆ ಎಂದರು.

ಪ್ರಸಕ್ತ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಲು ನಾವು ಬದ್ಧರಾಗಿದ್ದೇವೆ ಮತ್ತು ಇದೇ ವೇಳೆ ನಾವು ಎಲ್ಲ ಸಂದರ್ಭಗಳಿಗೂ ಸನ್ನದ್ಧರಾಗಿರುತ್ತೇವೆ ಎಂದು ಸದನವು ಭರವಸೆಯನ್ನು ಹೊಂದಬಹುದು ಎಂದ ಸಿಂಗ್,ಚೀನಾ ಐತಿಹಾಸಿಕವಾಗಿ ಈಗಿನ ಗಡಿಯನ್ನು ಒಪ್ಪುತ್ತಿಲ್ಲವಾದ್ದರಿಂದ ಅದರೊಂದಿಗಿನ ಗಡಿಸಮಸ್ಯೆ ಬಗೆಹರಿಯದೆ ಉಳಿದುಕೊಂಡಿದೆ ಎಂದರು. ಗಡಿಯಲ್ಲಿ ಯಾವುದೇ ಗಂಭೀರ ಸ್ಥಿತಿಯು ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.

ಗಡಿ ಪ್ರದೇಶಗಳಲ್ಲಿ ವಾಸ್ತವ ನಿಯಂತ್ರಣ ರೇಖೆಯನ್ನು ಸ್ಪಷ್ಟವಾಗಿ ರೂಪಿಸಲಾಗಿಲ್ಲ. ಉಭಯ ದೇಶಗಳ ನಡುವೆ ಗಡಿ ಕುರಿತು ಗ್ರಹಿಕೆಗಳಲ್ಲಿನ ವ್ಯತ್ಯಾಸಗಳು ಎಲ್‌ಎಸಿಯಲ್ಲಿ ಬಿಕ್ಕಟ್ಟುಗಳಿಗೆ ಕಾರಣವಾಗಿವೆ. ಬಿಕ್ಕಟ್ಟು ಬಗೆಹರಿಸುವ ಪ್ರಯತ್ನಗಳ ನಡುವೆಯೇ ಮೇ ಮಧ್ಯಭಾಗದಲ್ಲಿ ಚೀನಿ ಸೈನಿಕರು ಪೂರ್ವ ವಿಭಾಗದ ಇತರ ಪ್ರದೇಶಗಳಲ್ಲಿ ಎಲ್‌ಎಸಿಯನ್ನು ಅತಿಕ್ರಮಿಸಲು ಪ್ರಯತ್ನಿಸಿದ್ದರು. ಕೊಂಗ್ಕಾ ಲಾ,ಗೋಗ್ರಾ ಮತ್ತು ಪ್ಯಾಂಗೊಂಗ್ ಲೇಕ್ ಇವುಗಳಲ್ಲಿ ಸೇರಿವೆ. ಈ ಪ್ರಯತ್ನಗಳನ್ನು ಆರಂಭದಲ್ಲಿಯೇ ಗುರುತಿಸಲಾಗಿತ್ತು ಮತ್ತು ನಮ್ಮ ಸಶಸ್ತ್ರ ಪಡೆಗಳು ಸೂಕ್ತ ಉತ್ತರವನ್ನು ‘ಸೂಕ್ಷ್ಮತೆಯ ’ಹಿನ್ನೆಲೆಯಲ್ಲಿ ಸಿಂಗ್ ಹೇಳಿಕೆಯ ಬಳಿಕ ಚರ್ಚೆಗೆ ಸರಕಾರ ನಿರಾಕರಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು.

ಲಡಾಖ್‌ನಲ್ಲಿಯ ನಿಜವಾದ ಸ್ಥಿತಿಯನ್ನು ವಿವರಿಸುವಂತೆ ಸರಕಾರವನ್ನು ಪದೇ ಪದೇ ಒತ್ತಾಯಿಸಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರು ಮಂಗಳವಾರ ಸದನದಲ್ಲಿ ‘ಚೀನಾ ಕುರಿತು ಚರ್ಚೆ ನಡೆಯಬೇಕು ಮತ್ತು ಪ್ರಧಾನಿ ಉತ್ತರಿಸಲೇಬೇಕು ’ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಆಧಿರ ರಂಜನ ಚೌಧರಿ ಅವರಿಗೆ ಮಾತನಾಡಲು ಸ್ಪೀಕರ್ ನಿರಾಕರಿಸಿದ್ದನ್ನು ಪ್ರತಿಭಟಿಸಿ ಪಕ್ಷದ ಸದಸ್ಯರು ಸದನದಿಂದ ಹೊರನಡೆದರು.

ಹಾಲಿ ಅಮೆರಿಕದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು,‘ಚೀನಿಯರ ಅತಿಕ್ರಮಣ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ದಾರಿ ತಪ್ಪಿಸಿದ್ದರು ಎನ್ನುವುದು ರಕ್ಷಣಾ ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ನಮ್ಮ ದೇಶವು ಹಿಂದೆಯೂ ಭಾರತಿಯ ಸೇನೆಯ ಜೊತೆಯಲ್ಲಿತ್ತು ಮತ್ತು ಮುಂದೆಯೂ ಜೊತೆಯಲ್ಲಿರಲಿದೆ. ಆದರೆ ಮೋದಿಜಿ,ನೀವು ಯಾವಾಗ ಚೀನಾದ ವಿರುದ್ಧ ಎದ್ದು ನಿಲ್ಲುತ್ತೀರಿ? ಚೀನಾವನ್ನು ಹೆಸರಿಸಲು ಹೆದರಬೇಡಿ ’ಎಂದು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News