ನಿವೃತ್ತ ಖಜಾನಾ ನಿರ್ದೇಶಕ ಕೆ.ಕೆ.ನಾಯ್ಕ ನಿಧನ

Update: 2020-09-15 16:52 GMT

ಬ್ರಹ್ಮಾವರ, ಸೆ.15: ಮರಾಠಿ ಸಮುದಾಯದ ಹಿರಿಯ ನಾಯಕ ಹಾಗೂ ರಾಜ್ಯದ ನಿವೃತ್ತ ಖಜಾನಾ ನಿರ್ದೇಶಕ ಬಾರಕೂರಿನ ಕೂಡ್ಲಿ ಕೃಷ್ಣ ನಾಯ್ಕಿ (ಕೆ.ಕೆ.ನಾಯ್ಕಿ-74) ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಅವರು ಕೂಡ್ಲಿ ಮರಾಠಿ ಕೂಡುಕಟ್ಟಿನ ಗುರಿಕಾರರಾಗಿದ್ದರು. ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ರಂಗನಕೆರೆ ಶ್ರೀ ಗದ್ದುಗೆ ಅಮ್ಮನವರ ದೇವಸ್ಥಾನದ ಮೊಕ್ತೇಸರ, ಬಾರಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ರಂಗನಕೆರೆ ಶ್ರೀ ರತ್ನಗರ್ಭ ಗಣಪತಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿದ್ದರು.

ಬಾರಕೂರು ಪದವಿ ಕಾಲೇಜು ಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಕೆ.ಕೆ.ನಾಯ್ಕಾ, ಬಾರಕೂರು ವಿದ್ಯಾಭಿವರ್ದಿನಿ ಸಂಘದ ಮಾಜಿ ಖಜಾಂಚಿಯಾಗಿ ದ್ದರು. ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕ ಸದಸ್ಯರಾಗಿದ್ದ ಇವರು ನೂತನ ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News