ಉಡುಪಿ: ಕೋವಿಡ್ ವರದಿ ಇಲ್ಲ

Update: 2020-09-15 16:53 GMT

ಉಡುಪಿ, ಸೆ.15: ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಕರೆ ಯಂತೆ ಜಿಲ್ಲೆಯ ಸರಕಾರಿ ವೈದ್ಯಾಧಿಕಾರಿಗಳು ಮೊದಲ ಹಂತವಾಗಿ ಇಂದಿ ನಿಂದ ಆನ್‌ಲೈನ್ ಸಹಿತ ಎಲ್ಲ ಸರಕಾರಿ ಸಭೆಗಳಿಂದ ದೂರು ಉಳಿದ ಹಿನ್ನೆಲೆಯಲ್ಲಿ ಇಂದಿನ ಜಿಲ್ಲೆಯ ದೈನಂದಿನ ಕೋವಿಡ್ ವರದಿ ಬಿಡುಗಡೆ ಯಾಗಿಲ್ಲ.

ಈ ಹಿಂದೆ ಬಾಕಿ ಇದ್ದ ಸಂಗ್ರಹಿತ ಗಂಟಲುದ್ರವ ಮಾದರಿಗಳಲ್ಲಿ ಒಂದರ ಪರೀಕ್ಷಾ ವರದಿ ಪಾಸಿಟಿವ್ ಆಗಿ ಬಂದಿದೆ ಎಂದು ರಾಜ್ಯ ಬುಲೆಟಿನ್‌ ನಲ್ಲಿ ತಿಳಿಸಲಾಗಿದೆ. ಇದರಿಂದ ಒಟ್ಟು ಪಾಸಿಟಿವ್ ಪ್ರಕರಣಗಳು 14087ಕ್ಕೇರಿದೆ ಎಂದು ಇದರಲ್ಲಿ ನಮೂದಿಸಲಾಗಿದೆ.

ಜಿಲ್ಲೆಯ ವೈದ್ಯಾಧಿಕಾರಿಗಳೆಲ್ಲರೂ ಮುಷ್ಕರದಲ್ಲಿರುವುದರಿಂದ ಕೋವಿಡ್‌ಗೆ ಸಂಬಂಧಿಸಿದಂತೆ ಮಾಹಿತಿ, ಅಂಕಿಅಂಶ, ವರದಿ ಸಂಗ್ರಹಗಳು ಸ್ಥಗಿತಗೊಂಡಿವೆ. ಫೀವರ್ ಕ್ಲಿನಿಕ್, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾದರಿಗಳ ಸಂಗ್ರಹ ಸಿಬ್ಬಂದಿಗಳಿಂದ ಯಥಾಪ್ರಕಾರ ನಡೆಯುತ್ತಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News