ಅಮೆರಿಕದಲ್ಲಿ ಆ್ಯಸ್ಟ್ರಾಝೆನೆಕ ಲಸಿಕೆಯ ಪ್ರಯೋಗಕ್ಕೆ ವಿರಾಮ

Update: 2020-09-15 17:35 GMT

ಶಿಕಾಗೊ (ಅಮೆರಿಕ), ಸೆ. 15: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಔಷಧ ತಯಾರಿಕಾ ಕಂಪೆನಿ ಆ್ಯಸ್ಟ್ರಾಝೆನೆಕ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಕೊರೋನ ವೈರಸ್ ಲಸಿಕೆಯ ಪರೀಕ್ಷೆಯನ್ನು ಅಮೆರಿಕದಲ್ಲಿ ಸ್ಥಗಿತಗೊಳಿಸಲಾಗಿದೆ. ಈ ಅವಧಿಯಲ್ಲಿ, ಬ್ರಿಟನ್‌ನಲ್ಲಿ ನಡೆದ ಪರೀಕ್ಷೆಯ ವೇಳೆ ಕಂಡುಬಂದ ಗಂಭೀರ ಅಡ್ಡಪರಿಣಾಮಗಳ ಬಗ್ಗೆ ಅಮೆರಿಕ ತನಿಖೆ ನಡೆಸಲಿದೆ ಎಂದು ಬಲ್ಲ ಮೂಲಗಳು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಲಸಿಕೆಯ ಕ್ಲಿನಿಕಲ್ ಪರೀಕ್ಷೆಯ ವೇಳೆ ಓರ್ವ ಸ್ವಯಂಸೇವಕ ಗಂಭೀರ ಕಾಯಿಲೆಗೆ ಒಳಗಾದ ಬಳಿಕ ಕಳೆದ ವಾರ ಆ್ಯಸ್ಟ್ರಝೆನೆಕ ತನ್ನ ಲಸಿಕೆಯ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ನಿಯಂತ್ರಕ ಸಂಸ್ಥೆಯ ಅಧಿಕಾರಿಗಳು ಈ ಪ್ರಕರಣದ ವಿಶ್ಲೇಷಣೆ ನಡೆಸಿದ ಬಳಿಕ, ಲಸಿಕೆಯ ಕ್ಲಿನಿಕಲ್ ಪರೀಕ್ಷೆಯನ್ನು ಮುಂದುವರಿಸಲಾಗಿದೆ ಎಂಬುದಾಗಿ ಅದು ಬಳಿಕ ಶನಿವಾರ ಘೋಷಿಸಿತ್ತು.

ಈ ಲಸಿಕೆಯ ಅಮೆರಿಕ ಪರೀಕ್ಷೆಗೆ ಸ್ವಯಂಸೇವಕರನ್ನು ನೇಮಿಸುವ ಪ್ರಕ್ರಿಯೆ ಮತ್ತು ಇತರ ಪ್ರಯೋಗ ವಿಧಿವಿಧಾನಗಳನ್ನು ಕನಿಷ್ಠ ಈ ವಾರದ ಮಧ್ಯಭಾಗದವರೆಗೆ ನಿಲ್ಲಿಸಲಾಗಿದೆ ಎಂದು ಮೂಲಗಳು ‘ರಾಯ್ಟರ್ಸ್’ಗೆ ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News