ನೇಪಾಳದಲ್ಲಿ ಭೂಕಂಪ

Update: 2020-09-16 03:55 GMT

ಕಠ್ಮಂಡು: ನೇಪಾಳದಲ್ಲಿ ಬುಧವಾರ ಮುಂಜಾನೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.0ರಷ್ಟಿತ್ತು. ಸಿಂಧುಪಲಚೋಕ್ ಜಿಲ್ಲೆಯಲ್ಲಿ ಭೂಕಂಪದ ಕೇಂದ್ರಬಿಂದು ಇತ್ತು. 2015ರ ಭೀಕರ ಭೂಕಂಪ, ಭೂಕುಸಿತ ಹಾಗೂ ಪ್ರವಾಹದಿಂದ ಈಗಾಗಲೇ ಈ ಜಿಲ್ಲೆ ಜರ್ಜರಿತವಾಗಿದೆ.

"ಇಂದು ಬೆಳಗ್ಗೆ 5.19ಕ್ಕೆ ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ಹೊಂದಿದ್ದ ಭೂಕಂಪ ಸಂಭವಿಸಿದೆ" ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಟ್ವೀಟ್ ಮಾಡಿದೆ. ದೇಶದ ಪೂರ್ವಭಾಗದಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. 2015ರ ಭೂಕಂಪದ ಬಳಿಕ ಮುಂದುವರಿದಿರುವ ಸರಣಿ ಇದಾಗಿದೆ ಎಂದು ಎನ್‌ಎಸ್‌ಸಿ ಮುಖ್ಯ ಭೂಕಂಪ ಮಾಪನ ತಜ್ಞ ಭಿಜಯ್ ಅಧಿಕಾರಿ ದೃಢಪಡಿಸಿದ್ದಾರೆ.

ಭೂಕಂಪದ ಕೇಂದ್ರ ಹಾಗೂ ಸುತ್ತಮುತ್ತ ಸದ್ಯ ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. "ಯಾವುದೇ ಜೀವಹಾನಿ ಬಗ್ಗೆ ವರದಿ ಯಾಗಿಲ್ಲ. ನಾವು ಈಗಾಗಲೇ ಜಿಲ್ಲೆಯ ಎಲ್ಲ ವಾರ್ಡ್‌ಗಳನ್ನು ಸಂಪರ್ಕಿಸಿ, ಯಾವುದೇ ದುರಂತ ಸಂಭವಿಸಿದೆಯೇ ಅಥವಾ ಯಾವುದೇ ನೆರವಿನ ಅಗತ್ಯವಿದೆಯೇ ಎಂದು ಕೇಳಿದ್ದೇವೆ. ಯಾವುದೇ ಹಾನಿ ಬಗ್ಗೆ ಮಾಹಿತಿ ಬಂದಿಲ್ಲ" ಎಂದು ಎಸ್ಪಿ ರಂಜತ್ ಅಧಿಕಾರಿ ದೂರವಾಣಿ ಮೂಲಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News