ಭಾರತೀಯ ಮೂಲದ ಉದ್ಯಮಿಯನ್ನು ಅಪರಾಧಿ ಎಂದು ಘೋಷಿಸಿದ ಅಮೆರಿಕಾ ನ್ಯಾಯಾಲಯ

Update: 2020-09-16 09:12 GMT

 ವಾಷಿಂಗ್ಟನ್ : ವಂಚನೆಯ ಮೂಲಕ 17 ಮಿಲಿಯನ್ ಡಾಲರ್  ಸಾಲವನ್ನು ನ್ಯೂಜೆರ್ಸಿ ಮೂಲದ ಲೋಟಸ್ ಎಕ್ಸಿಮ್ ಇಂಟರ್‍ನ್ಯಾಷನಲ್ ಇಂಕ್  ಎಂಬ ಹೆಸರಿನ ಶಿಲೆ ಮತ್ತು ಗ್ರಾನೈಟ್ ಹೋಲ್‍ಸೇಲ್ ಸಂಸ್ಥೆಯ ಅಧ್ಯಕ್ಷರಾಗಿರುವ 61 ವರ್ಷದ ಭಾರತೀಯ-ಅಮೆರಿಕನ್ ವ್ಯಕ್ತಿ ರಾಜೇಂದ್ರ ಕಂಕರಿಯಾ ತಮ್ಮ ಇತರ ಉದ್ಯೋಗಿಗಳ ಸಹಕಾರದಿಂದ ಪಡೆದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಅಲ್ಲಿನ  ನ್ಯಾಯಾಲಯ ಘೋಷಿಸಿದ್ದು ಅವರಿಗೆ 30 ವರ್ಷ ಜೈಲು ಶಿಕ್ಷೆ ಹಾಗೂ 1 ಮಿಲಿಯನ್ ಡಾಲರ್ ದಂಡ ವಿಧಿಸಲ್ಪಡುವ ಸಾಧ್ಯತೆಯಿದೆ. ಅವರ ಶಿಕ್ಷೆಯ ಪ್ರಮಾಣವನ್ನು ಜನವರಿ 18ರಂದು ಘೋಷಿಸಲಾಗುವುದು.

ಕಂಪೆನಿಗೆ ಬರಲಿರುವ ಆದಾಯ ಮೊತ್ತ ಕಡಿಮೆಯಾಗಿದ್ದರೂ ಅದನ್ನು ಬಹಳಷ್ಟು ಹೆಚ್ಚಿಸಿ ದಾಖಲೆಪತ್ರಗಳಲ್ಲಿ ತೋರಿಸಿ ಕಂಕರಿಯಾ ಸಾಲ ಪಡೆದಿದ್ದರೆನ್ನಲಾಗಿದ್ದು ಕೊನೆಗೆ ಸಾಲ ತೀರಿಸಲು ವಿಫಲರಾಗಿದ್ದರು.
ಸಾಲ ಪಡೆಯುವ ಸಂದರ್ಭ  ಗ್ರಾಹಕರಿಂದ ಸಾಕಷ್ಟು ಮೊತ್ತ ಬರಲಿದೆ ಎಂದು ಬ್ಯಾಂಕ್‍ಗೆ ತೋರಿಸುವ ಸಲುವಾಗಿ  ಅವರ ಸಂಸ್ಥೆಯ ಉದ್ಯೋಗಿಗಳೇ ಗ್ರಾಹಕರ ನಕಲಿ ಇಮೇಲ್ ಸೃಷ್ಟಿಸಿ ಬ್ಯಾಂಕ್  ನಂಬುವಂತೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News