ಕಾರ್ಕಳ ನಿವೃತ್ತ ಉಪ ತಾಹಶೀಲ್ದಾರ್ ನಿಧನ

Update: 2020-09-16 11:14 GMT

ಕಾರ್ಕಳ : ತಾಲೂಕಿನ ಜಯಂತಿ ‌ನಗರ ನಿವಾಸಿ ನಿವೃತ್ತಿ ಉಪ ತಾಹಶೀಲ್ದಾರ್ ಕೆ.ಎಚ್. ಖಾನ್ (91) ಅವರು ಅಲ್ಪಕಾಲಿದ ಆಸೌಖ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ನಿವೃತ್ತಿ ಬಳಿಕ ಕ್ರೀಯಾ ಶೀಲರಾಗಿ ಸಾಮಾಜಿಕ, ದಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಅವರು ಕಾರ್ಕಳ ತಾಲೂಕು ಜಮೀಯತುಲ್ ಫಲಾಹ್ ಇದರ ಸ್ಥಾಪಕ ಅಧ್ಯಕ್ಷ ರಾಗಿ ಕಾರ್ಕಳ ಮುಸ್ಲಿಂ ಜಮಾಅತ್ ಇದರ ಸಲಹೆಗಾರರು ಹಾಗೂ ಚುನಾವಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಕಾರ್ಕಳದ ಕೆಲವು ಶಿಕ್ಷಣ ಸಂಸ್ಥೆಗಳಿಗೆ‌ ಉಚಿತ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಕಾರ್ಕಳ ತಾಲೂಕು ಕಚೇರಿಯಲ್ಲಿ ಉಪ ತಾಹಶೀಲ್ದಾರ್ ರಾಗಿ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಶ್ರಮಿಸಿದ್ದಾರೆ. ಆರ್ಥಿಕ ವಾಗಿ ಹಿಂದುಳಿದ ಹಲವಾರು ಮಂದಿಗೆ ಸರಕಾರಿ ಸವಲತ್ತು ಗಳನ್ನು ಒದಗಿಸುವಲ್ಲಿ ಪ್ರಮಾಣಿಕವಾಗಿ ಪ್ರಯತ್ನಿಸಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ‌ಪುತ್ರಿಯರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಅಲ್ ಮಾರೀಫ್ ಎಜುಕೇಷನ್ ಟ್ರಸ್ಟ್ ‌ನ ಅಧ್ಯಕ್ಷ ಮುಫ್ತಿ ಅಲ್ ಹಾಜ್, ಅಬ್ದುಲ್ ರಹ್ಮಾನ್ ಸಾಹೇಬ್ ಕಾರ್ಕಳ, ಜಿಲ್ಲಾ ವಕ್ಫ್ ಸಮಿತಿ ಸದಸ್ಯ ನಾಸಿರ್ ಶೇಖ್, ಜಿಲ್ಲಾ ಮುಸ್ಲಿಂ ಒಕ್ಕೂಟ ಉಡುಪಿ ತಾಲೂಕು ಅಧ್ಯಕ್ಷ ಮಹಮ್ಮದ್ ಗೌಸ್, ಕೆ ಎಂ ಇ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ ಎಂ ಇಮಿಯ್ತಾಝ್, ಅಹ್ಮದ್,  ಜಮಾಯ್ಯತುಲ್ ಫಲಾಹ್ ಕಾರ್ಕಳ ಕಾರ್ಯದರ್ಶಿ ಸಯ್ಯದ್ ಹಸನ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾರ್ಕಳ ಘಟಕ ಕಾರ್ಯಾಧ್ಯಕ್ಷ ಮುಹಮ್ಮದ್ ಗೌಸ್ , ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್, ಸರ್ ಹಿಂದ್ ಇಸ್ಲಾಮಿಕ್ ಅಕಾಡಮಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್, ಕಾರ್ಕಳ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಶ್ಫಕ್ ಅಹ್ಮದ್, ಜಮೀಯತುಲ್ ಫಲಾಹ್ ಕಾರ್ಕಳ ಅಧ್ಯಕ್ಷ ಮುಹಮ್ಮದ್ ಯಕೂಬ್ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News