×
Ad

ಬೆಳ್ತಂಗಡಿ: ಬೆಳಾಲು ಪ್ರಕರಣದ ಬಗ್ಗೆ ತನಿಖೆ ನಡೆಸಲು ಮುಸ್ಲಿಂ ಸಂಘಟನೆಗಳ ಒಕ್ಕೂಟ ಮನವಿ

Update: 2020-09-16 19:24 IST

ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಸುರುಳಿಯಲ್ಲಿ ಹಾಗೂ ಉಜಿರೆಯ ನಿನ್ನಿ ಕಲ್ಲು ಪ್ರದೇಶದಲ್ಲಿ ಕಳೆದ ಎರಡು ವಾರಗಳಲ್ಲಿ  ನಡೆದ ಘಟನೆಗಳಲ್ಲಿ ಮುಸ್ಲಿಂ ಯುವಕರ ಬಗ್ಗೆ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಿ ಸುಳ್ಳು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣಗಳ ಸತ್ಯಾ ಸತ್ಯತೆಯನ್ನು ತಿಳಿಯಲು ತಾಲೂಕು ಆಡಳಿತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತಂಡ ರಚಿಸುವಂತೆ ಬೆಳ್ತಂಗಡಿ ತಾಲೂಕು ಮುಸ್ಲಿಂ ಸಂಘಟನೆಗಳ  ಒಕ್ಕೂಟ ಒತ್ತಾಯಿಸಿದೆ.

ಬೆಳ್ತಂಗಡಿ ಯಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ವಿಚಾರ ತಿಳಿಸಿದರು.

ಬೆಳಾಲು ಹಾಗೂ ಉಜಿರೆಯಲ್ಲಿ ನಡೆದ ಘಟನೆಗಳಲ್ಲಿ ದಲಿತ ಯುವತಿಯರನ್ನು ಬಳಕೆ ಮಾಡಿಕೊಳ್ಳಲಾಗಿದ್ದು ಪೂರ್ವ ನಿಯೋಜಿತವಾಗಿ ರೂಪಿಸಿದ ಸಂಚಿನಂತೆ ಘಟನೆಗಳನ್ನು ಸೃಷ್ಟಿಸಿದ್ದು ಆರ್ ಎಸ್ ಎಸ್ ಪ್ರೇರಿತ ಗೂಂಡಾಗಳು ದಾಳಿ ನಡೆಸಿದ್ದಾರೆ.  ಒಟ್ಟು ಘಟನೆಗಳನ್ನು ಗಮನಿಸಿದರೆ ಇದು ಉದ್ದೇಶ ಪೂರ್ವಕವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಅವರ ಮೇಲೆ  ಹಲ್ಲೆ, ಆಪಾದನೆಗಳನ್ನು ಮಾಡಿ ದೌರ್ಜನ್ಯ ನಡೆಸುವುದು ಹಾಗೂ ಈ ಮೂಲಕ ಕೋಮುಗಲಭೆಗಳನ್ನು ಸೃಷ್ಟಿಸಿ  ರಾಜಕೀಯ ಲಾಭ ಪಡೆಯುವ ಷಡ್ಯಂತ್ರವಿದೆ ಎಂದು ಸಮಿತಿ ಆರೋಪಿಸಿದೆ.

ಬೆಳಾಲಿನ ಘಟನೆಯ ತನಿಖೆಗೆ ತೆರಳಿದ ಪೊಲೀಸ್ ಅಧಿಕಾರಿಗಳ ಮುಂದೆ ಅದೇ ಗ್ರಾಮದ ಎಲ್ಲ ಸಮುದಾಯದ ಮಹಿಳೆಯರೂ ಸೇರಿ ನಾಗರಿಕರು ಘಟನೆಯ ಬಗ್ಗೆ ಸಂದೇಹ ವ್ಯಕ್ತ ಪಡಿಸಿದ ಘಟನೆಯೂ ನಡೆದಿದ್ದು ಇದನ್ನು ಗಮನಿಸಿ ಪೊಲೀಸರಯ ಸರಿಯಾದ ತನಿಖೆ ನಡೆಸಬೇಕು. ದಲಿತ ಸಮುದಾಯದ ಪರವಾಗಿ ಅವರ ನೋವುಗಳಿಗೆ ಸ್ಪಂದಿಸುವ ಕಾರ್ಯವನ್ನು ಮುಸ್ಲಿಂ ಸಂಘಟನೆಗಳು ಸಿದ್ಧವಿದೆ ಇದೀಗ ಸಂಘಪರಿವಾರ ದಲಿತ ಮಹಿಳೆಯರನ್ನು ಉಪಯೋಗಿಸಿ ಮುಸ್ಲಿಂ ಯುವಕರನ್ನು ಸುಳ್ಳು ಕೇಸುಗಳಲ್ಲಿ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ಪೋಲೀಸ್ ಇಲಾಖೆ ಈ ಎಲ್ಲ ವಿಚಾರಗಳನ್ನೂ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮನವಿ ನೀಡಲಾಗುವುದು. ಇಲಾಖೆ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಸಂಘಟನೆಯ ವತಿಯಿಂದ ಹೋರಾಟ ನಡೆಯಲಿದೆ ಎಂದು ಮುಖಂಡರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತಕ್ಕೆ ಮನವಿ ನೀಡಲಾಗುವುದು. ಈ ಎರಡೂ ಘಟನೆಗಳ ಹಿಂದಿರುವ ನೈಜ್ಯ ವಿಚಾರಗಳು ಬಹಿರಂಗಗೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಿಕಾ ಗೋಷ್ಟಿಯಲ್ಲಿ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಸ್ ಎಂ ಕೋಯ ಉಜಿರೆ,  ಪಿ.ಎಫ್.ಐ ತಾ.‌ ಅಧ್ಯಕ್ಷ ಹೈದರ್ ನೀರ್ಸಾಲ್, ಎಸ್.ಎಮ್.ಎ ರಾಜ್ಯ ಕಾರ್ಯದರ್ಶಿ ಸಾದಿಕ್ ಮಲೆಬೆಟ್ಟು, ರಾಜ್ಯ ಉಪಾಧ್ಯಕ್ಷ ಎ.ಕೆ ಅಹಮದ್, ಮುಸ್ಲಿಂ ಜಮಾಅತ್ ತಾಲೂಕು ಕಾರ್ಯದರ್ಶಿ ಮುಹಮ್ಮದ್ ರಫಿ, ತಾ. ಮುಸ್ಲಿಂ ಒಕ್ಕೂಟದ ಅಧ್ಯಕ್ಷ ನಝೀರ್ ಬಿ. ಎ, ಸಾಮಾಜಿಕ ಕಾರ್ಯಕರ್ತರಾದ ಅಕ್ಬರ್ ಸಂಜಯನಗರ, ಅಬ್ದುಲ್ ಹಕೀಂ ನೆರಿಯ, ಅಬ್ದುಲ್ ರಹ್ಮಾನ್ ಕಕ್ಕಿಂಜೆ,  ಎಸ್.ಕೆ.ಎಸ್ಸೆಸ್ಸೆಫ್ ಬೆಳ್ತಂಗಡಿ ವಲಯ ಉಪಾಧ್ಯಕ್ಷ ರಝಾಕ್ ಕನ್ನಡಿಕಟ್ಟೆ, ತಾ.ಮುಸ್ಲಿಂ ಐಕ್ಯತಾ ವೇದಿಕೆ ಅಧ್ಯಕ್ಷ ಸಲೀಂ ಗುರುವಾಯನಕೆರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News