×
Ad

ಸೇವಾ ಹೀ ಸಂಘಟನೆ ಪರಿಕಲ್ಪನೆಯಡಿ ವಿವಿಧ ಕಾರ್ಯಕ್ರಮ

Update: 2020-09-16 19:50 IST

ಉಡುಪಿ, ಸೆ.16: ಸೇವಾ ಹೀ ಸಂಘಟನೆ ಎಂಬ ಪರಿಕಲ್ಪನೆಯಡಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಹಾಗೂ ಗಾಂಧಿ ಜಯಂತಿ ಪ್ರಯುಕ್ತ ಅ.2 ವರೆಗೆ ಸೇವಾ ಸಪ್ತಾಹದಡಿ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಪಕ್ಷದ ಜಿಲ್ಲಾ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿ ಮಂಡಲದಲ್ಲಿ 70 ಅಂಗವಿಕಲರಿಗೆ ಕೃತಕ ಅಂಗ ಜೋಡಣೆ, 70 ಜನರಿಗೆ ಉಚಿತ ಕನ್ನಡಕ, ಹಣ್ಣುಹಂಪಲು ವಿತರಣೆ, ಕೊರೋನಾ ಸೋಂಕಿತ 70 ಮಂದಿಗೆ ಪ್ಲಾಸ್ಮಾದಾನ, ಯುವ ಮೋರ್ಚಾದ ವತಿಯಿಂದ ರಕ್ತದಾನ, ಪ್ರತಿ ಬೂತ್‌ನಲ್ಲಿ 70 ವೃಕ್ಷಾರೋಪಣ ಹಾಗೂ ಪರಿಸರ ಸಂರಕ್ಷಣೆ ಸಂಕಲ್ಪ, 70 ಹಳ್ಳಿಯಲ್ಲಿ ಸ್ವಚ್ಛತಾ ಅಭಿಯಾನ, ಪ್ಲಾಸ್ಟಿಕ್ ನಿಷೇಧ ಸಂಕಲ್ಪ, ಪ್ರತಿ ಜಿಲ್ಲಾ ಕೇಂದ್ರದಲ್ಲಿ 70 ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತಾ ಕಾರ್ಯಕ್ರಮ, ವರ್ಚುವಲ್ ಸಮಾವೇಶ ಸೇರಿದಂತೆ ವಿವಿಧ ಕಾಯರ್ಕ್ರಮಗಳು ನಡೆಯಲಿವೆ ಎಂದರು.

ಸೆ.25ರ ಪಂಡಿತ್ ದೀನದಯಾಳ್ ಜಯಂತಿ ಅಂಗವಾಗಿ ವೆಬಿನಾರ್ ಮೂಲಕ ಪಂಡಿತ್ ಹಾಗೂ ಪಕ್ಷದ ವಿಚಾರ ಧಾರೆಯ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಅ.2ರ ಗಾಂಧಿ ಜಯಂತಿ ಪ್ರಯುಕ್ತ ವಿವಿಧ ಅಭಿಯಾನ ಹಮ್ಮಿಕೊಳ್ಳಲಾಗುವುದು. ಆತ್ಮನಿರ್ಭರ ಭಾರತ ಸಂಕಲ್ಪದಡಿ ಯಲ್ಲಿ ಸಂವಾದ ಕಾರ್ಯಕ್ರು ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಶ್ರೀಶ ನಾಯಕ್, ಪ್ರಧಾನ ಕಾರ್ಯ ದರ್ಶಿ ಸದಾನಂದ ಉಪ್ಪಿನಕುದ್ರು, ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಶೆಟ್ಟಿ, ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News