2017, 2018ರಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ 1,198 ಜನರ ಬಂಧನ

Update: 2020-09-16 14:43 GMT

ಹೊಸದಿಲ್ಲಿ,ಸೆ.16: ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯಡಿ 2017 ಮತ್ತು 2018ರಲ್ಲಿ ದೇಶಾದ್ಯಂತ 1,198 ಜನರನ್ನು ಪೊಲೀಸರು ಬಂಧಿಸಿದ್ದು, ಈ ಪೈಕಿ 563 ಜನರು ಈಗಲೂ ಬಂಧನದಲ್ಲಿದ್ದಾರೆ ಎಂದು ಸಹಾಯಕ ಗೃಹಸಚಿವ ಜಿ.ಕಿಶನ್ ರೆಡ್ಡಿ ಅವರು ಬುಧವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.

ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕವು ಇತ್ತೀಚಿಗೆ ಪ್ರಕಟಿಸಿರುವ 2018ರ ವರದಿಯಂತೆ 2017 ಮತ್ತು 2018ರಲ್ಲಿ ಎನ್‌ಎಸ್‌ಎ ಅಡಿ ಮಧ್ಯಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಜನರನ್ನು ಬಂಧಿಸಲಾಗಿದ್ದು, ಉತ್ತರ ಪ್ರದೇಶವು ನಂತರದ ಸ್ಥಾನದಲ್ಲಿದೆ. ಈ ಕಾಯ್ದೆಯಡಿ 2017ರಲ್ಲಿ ದೇಶಾದ್ಯಂತ 501 ಜನರನ್ನು ಬಂಧಿಸಲಾಗಿದ್ದು,ಈ ಪೈಕಿ 229 ಜನರನ್ನು ಪುನರ್‌ಪರಿಶೀಲನಾ ಮಂಡಳಿಗಳು ಬಿಡುಗಡೆಗೊಳಿಸಿವೆ ಮತ್ತು 272 ಜನರು ಈಗಲೂ ಬಂಧನದಲ್ಲಿದ್ದಾರೆ. 2018ರಲ್ಲಿ 697 ಜನರನ್ನು ಬಂಧಿಸಲಾಗಿತ್ತು ಮತ್ತು ಈ ಪೈಕಿ 406 ಜನರು ಬಿಡುಗಡೆಗೊಂಡಿದ್ದು, 291 ಜನರು ಬಂಧನದಲ್ಲಿದ್ದಾರೆ ಎಂದೂ ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News