ಕರಾವಳಿಯಲ್ಲಿ ಮೂರು ದಿನ ಉತ್ತಮ ಮಳೆ ನಿರೀಕ್ಷೆ

Update: 2020-09-16 16:08 GMT

ಮಂಗಳೂರು, ಸೆ.16: ರಾಜ್ಯದ ಕರಾವಳಿಯಲ್ಲಿ ಮಳೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿರುವುರಿಂದ ಮುಂದಿನ ಮೂರು ದಿನ ಉತ್ತಮ ಮಳೆ ಸುರಿಯುವ ಸಾಧ್ಯತೆಯಿದೆ.

ನೈಋತ್ಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶವೊಂದು ನಿರ್ಮಾಣವಾಗುವ ಲಕ್ಷಣಗಳು ಗೋಚರಿಸಿದ್ದು, ಅದರ ಪ್ರಭಾವ ಕರ್ನಾಟಕ ಕರಾವಳಿಯ ಮೇಲೂ ಆಗುವುದರಿಂದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬುಧವಾರ ಮುಂಜಾನೆ ವೇಳೆ ಜಿಲ್ಲಾದ್ಯಂತ ಸಾಧಾರಣದಿಂದ ಉತ್ತಮ ಮಳೆಯಾಗಿದ್ದು, ಹೊತ್ತೇರುತ್ತಿದ್ದಂತೆ ಮೋಡ ಕವಿದ ಬಿಸಿಲಿನ ವಾತಾವರಣ ಕಂಡು ಬಂದಿದೆ. ಸಂಜೆ ಮತ್ತೆ ಧಾರಾಕಾರ ಮಳೆ ಸುರಿದಿದೆ. ರಾತ್ರಿಯೂ ಮುಂದುವರಿದಿದೆ. ಘಟ್ಟದ ತಪ್ಪಲಿನ ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕಿನ ವಿವಿಧೆಡೆ ಮಳೆ ಜೋರಾಗಿತ್ತು. ಹವಾಮಾನ ಇಲಾಖೆ ಕರಾವಳಿಗೆ ಗುರುವಾರ ಆರೆಂಜ್ ಅಲರ್ಟ್, ಶುಕ್ರವಾರದಿಂದ ಮೂರು ದಿನ ಆರೆಂಜ್ ಅಲರ್ಟ್ ಘೋಷಿಸಿದೆ.

ಬುಧವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಬಂಟ್ವಾಳ 23, ಬೆಳ್ತಂಗಡಿ 25.6, ಮಂಗಳೂರು 37.4, ಪುತ್ತೂರು 13.4, ಸುಳ್ಯ 27.5 ಮಿ.ಮೀ. ಸಹಿತ ದ.ಕ. ಜಿಲ್ಲೆಯಲ್ಲಿ ಸರಾಸರಿ 25.4 ಮಿ.ಮೀ. ಮಳೆ ಸುರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News