ಕುವೈತ್ : ನಾಲ್ಕು ದಿನದಲ್ಲಿ ಉಡುಪಿಯ ಮಹಿಳೆ ತವರಿಗೆ

Update: 2020-09-16 16:10 GMT

ಮಂಗಳೂರು, ಸೆ.16: ಕುವೈತ್ ಪೊಲೀಸರ ವಶದಲ್ಲಿರುವ ಉಡುಪಿ ಜಿಲ್ಲೆಯ ಶಿರ್ವದ 62 ವರ್ಷದ ಮಹಿಳೆ ನಾಲ್ಕು ದಿನಗಳಲ್ಲಿ ತವರಿಗೆ ಮರಳುವ ನಿರೀಕ್ಷೆಯಿದೆ. ಭಾರತೀಯ ರಾಯಭಾರಿ ಕಚೇರಿ ಜತೆಗೆ ಕೇರಳ-ಕುವೈತ್ ಮುಸ್ಲಿಂ ಅಸೋಸಿಯೇಶನ್ ಕರ್ನಾಟಕ ವಿಭಾಗದ ಪದಾಧಿಕಾರಿ ಅಬ್ದುಲ್ ಲತೀಫ್ ಆಕೆಯನ್ನು ವಾಪಸ್ ಕಳುಹಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ.

ಮಹಿಳೆ ಪ್ರಸ್ತುತ ಕುವೈತ್ ಪೊಲೀಸರ ವಶದಲ್ಲಿದ್ದಾರೆ. ಆಕೆ ಕೆಲಸ ಮಾಡುತ್ತಿದ್ದ ಮನೆಯವರು ‘ಮಹಿಳೆ ಕಾಣೆಯಾಗಿದ್ದಾರೆ’ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರವಿವಾರ ರಾತ್ರಿ ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದರು.

ಪ್ರಸ್ತುತ ಆಕೆಯನ್ನು ವಾಪಸ್ ಕಳುಹಿಸಲು ಅಲ್ಲಿನ ಆಡಳಿತ ನಿರ್ಧರಿಸಿದೆ. ಇದರಿಂದ ಆಕೆಗೆ ಮತ್ತೆ ಕುವೈತ್‌ಗೆ ಹೋಗಲು ಸಾಧ್ಯವಾಗುವುದಿಲ್ಲ. ಮುಂದಿನ ಕೆಲದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.

ಆಕೆಯ ಸಂಬಂಧಿಕರೂ ಸೇರಿದಂತೆ ಕೆಲ ಕರಾವಳಿ ಮೂಲದವರು ಆಕೆಗೆ ಟಿಕೆಟ್ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಕುವೈತ್‌ಗೆ ಬಂದಿರುವ ಹೊಸ ರಾಯಭಾರಿ ಈ ವಿಚಾರದಲ್ಲಿ ಹೆಚ್ಚು ಉತ್ಸುಕರಾಗಿದ್ದು, ಅನಿವಾಸಿ ಭಾರತೀಯರ ಸಮಿತಿ ಕರ್ನಾಟಕ ಉಪಾಧ್ಯಕ್ಷೆ ಡಾ.ಭಾರತಿ ಕೃಷ್ಣ ಅವರೂ ನೆರವು ನೀಡುತ್ತಿದ್ದಾರೆ ಎಂದು ಮೋಹನ್‌ದಾಸ್ ಕಾಮತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News