ಇಸ್ರೇಲ್ ಜೊತೆಗೆ ಶಾಂತಿ ಒಪ್ಪಂದಕ್ಕೆ ಯುಎಇ, ಬಹರೈನ್ ಸಹಿ

Update: 2020-09-16 18:04 GMT

ವಾಶಿಂಗ್ಟನ್, ಸೆ. 16: ಇಸ್ರೇಲ್‌ನೊಂದಿಗೆ ಔಪಚಾರಿಕ ಸಂಬಂಧವನ್ನು ಸ್ಥಾಪಿಸುವ ಒಪ್ಪಂದಗಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಬಹರೈನ್‌ಗಳು ಮಂಗಳವಾರ ಇಲ್ಲಿನ ಶ್ವೇತಭವನದಲ್ಲಿ ಸಹಿ ಹಾಕಿದವು. ಇದರೊಂದಿಗೆ, ಇವುಗಳು 25 ವರ್ಷಗಳಲ್ಲೇ, ಸುದೀರ್ಘ ಅವಧಿಯ ನಿಷೇಧವನ್ನು ಮುರಿದ ಮೊದಲ ಅರಬ್ ದೇಶಗಳಾದವು.

ಈ ಬೆಳವಣಿಗೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಇರಾನ್ ವಿರುದ್ಧ ಹೊಸದೊಂದು ಗುಂಪು ಸೃಷ್ಟಿಯಾದಂತಾಗಿದೆ.

ಶ್ವೇತಭವನದ ಹುಲ್ಲುಹಾಸಿನಲ್ಲಿ ನೆರೆದ ನೂರಾರು ಜನರ ಸಮ್ಮುಖದಲ್ಲಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಯುಎಇ ವಿದೇಶ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಾಯಿದ್ ಅಲ್ ನಹ್ಯಾನ್ ಮತ್ತು ಬಹರೈನ್ ವಿದೇಶ ಸಚಿವ ಅಬ್ದುಲ್ಲತೀಫ್ ಅಲ್ ಝಯಾನಿ ಒಪ್ಪಂದಗಳಿಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಪಸ್ಥಿತರಿದ್ದರು.

ಇದಕ್ಕೂ ಮೊದಲು, 1979ರಲ್ಲಿ ಈಜಿಪ್ಟ್‌ನೊಂದಿಗೆ ಮತ್ತು 1994ರಲ್ಲಿ ಜೋರ್ಡಾನ್‌ನೊಂದಿಗೆ ಇಸ್ರೇಲ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News