ಬ್ರಿಟನ್: ಭಾರತ ಮೂಲದ ದಂಪತಿಯಿಂದ ಭಾರೀ ಪ್ರಮಾಣದ ಅಕ್ರಮ ಹಣ ವಶ

Update: 2020-09-16 18:08 GMT

ಲಂಡನ್, ಸೆ. 16: ಬ್ರಿಟನ್‌ನ ಅಪರಾಧ ತಡೆ ಅಧಿಕಾರಿಗಳು ಮತ್ತು ಪೊಲೀಸರು ಭಾರತ ಮೂಲದ ದಂಪತಿಯೊಂದರಿಂದ 3 ಲಕ್ಷ ಪೌಂಡ್ (ಸುಮಾರು 2.86 ಕೋಟಿ ರೂಪಾಯಿ) ನಗದನ್ನು ವಶಪಡಿಸಿಕೊಂಡಿದ್ದಾರೆ. ಅವರು ಈ ಹಣವನ್ನು ಅಪರಾಧ ಕೃತ್ಯಗಳ ಮೂಲಕ ಸಂಪಾದಿಸಿದ್ದಾರೆ ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ.

ವಾಯುವ್ಯ ಲಂಡನ್‌ನ ಎಜ್‌ವೇರ್‌ನಲ್ಲಿರುವ ಸೈಲೇಶ್ ಮತ್ತು ಹರ್ಕಿತ್ ಸಿಂಗಾರ ದಂಪತಿಗೆ ಸೇರಿದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದಾಗ ಅಕ್ರಮ ಹಣ ಪತ್ತೆಯಾಗಿದೆ ಎಂದು ನ್ಯಾಶನಲ್ ಕ್ರೈಮ್ ಏಜನ್ಸಿ (ಎನ್‌ಸಿಎ) ತಿಳಿಸಿದೆ.

 ‘‘ಕೆಲವು ನಗದು ಸೇವಾ ಉದ್ಯಮ (ಎಮ್‌ಎಸ್‌ಬಿ)ಗಳು ಅಕ್ರಮ ಹಣ ವರ್ಗಾವಣೆ ಮಾಡುವ ಮೂಲಕ ಬ್ರಿಟನ್‌ಗೆ ಅಪಾಯವನ್ನು ಒಡ್ಡುವುದನ್ನು ಮುಂದುವರಿಸುತ್ತಿದ್ದಾರೆ. ಈ ಸವಾಲನ್ನು ಹೆಚ್ಚೆಚ್ಚು ಅರ್ಥಮಾಡಿಕೊಂಡಿರುವ ಆರ್ಥಿಕ ಇಲಾಖೆಗಳ ಅಧಿಕಾರಿಗಳು ಮತ್ತು ಪೊಲೀಸರು ಶಂಕಿತ ಉದ್ಯಮಗಳ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ’’ ಎಂದು ಎನ್‌ಸಿಎಯ ಸ್ಪಂದನ ವಿಭಾಗದ ಮುಖ್ಯಸ್ಥೆ ರ್ಯಾಚೆಲ್ ಹರ್ಬರ್ಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News