3 ಕೋಟಿ ದಾಟಿದ ಜಾಗತಿಕ ಕೊರೋನ ವೈರಸ್ ಸೋಂಕು

Update: 2020-09-17 17:35 GMT

ಪ್ಯಾರಿಸ್ (ಫ್ರಾನ್ಸ್), ಸೆ. 17: ಜಾಗತಿಕವಾಗಿ ಕೊರೋನ ವೈರಸ್ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ ಗುರುವಾರ 3 ಕೋಟಿಯನ್ನು ದಾಟಿದೆ ಹಾಗೂ ಸಾಂಕ್ರಾಮಿಕವು ದುರ್ಬಲಗೊಳ್ಳುವ ಯಾವುದೇ ಸೂಚನೆಯನ್ನು ನೀಡುತ್ತಿಲ್ಲ ಎಂದು ‘ರಾಯ್ಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

 ಭಾರತ ಸಾಂಕ್ರಾಮಿಕದ ಹೊಸ ಕೇಂದ್ರಬಿಂದುವಾಗಿ ಮೂಡಿಬರುತ್ತಿದೆ. ಅದೇ ವೇಳೆ, ಒಟ್ಟು ಜಾಗತಿಕ ಪ್ರಕರಣಗಳ ಅರ್ಧದಷ್ಟು ಭಾಗ ಉತ್ತರ ಮತ್ತು ದಕ್ಷಿಣ ಅವೆುರಿಕಗಳಿಂದ ವರದಿಯಾಗಿದೆ.

ಕೊರೋನ ವೈರಸ್‌ನಿಂದಾಗಿ ಸಂಭವಿಸಿದ ಜಾಗತಿಕ ಸಾವುಗಳ ಸಂಖ್ಯೆ 10 ಲಕ್ಷವನ್ನು ಸಮೀಪಿಸುತ್ತಿದೆ.

ಇತ್ತೀಚಿನ ದಿನಗಳಲ್ಲಿ, ಪ್ರತಿ ದಿನದ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ದಾಖಲೆಯ ಏರಿಕೆಯಾಗುತ್ತಿದೆ.

ಭಾರತದಲ್ಲಿ ಬುಧವಾರದವರೆಗೆ ಒಟ್ಟು 50 ಲಕ್ಷಕ್ಕೂ ಹೆಚ್ಚಿನ ಸೋಂಕು ಪ್ರಕರಣಗಳು ದಾಖಲಾಗಿವೆ. ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಭಾರತವು ಅವೆುರಿಕದ ಬಳಿಕ ಎರಡನೇ ಸ್ಥಾನದಲ್ಲಿದೆ.

ಆಗಸ್ಟ್ ಮಧ್ಯ ಭಾಗದಿಂದ ಭಾರತದಲ್ಲಿ ಪ್ರತಿ ದಿನ ಅಮೆರಿಕಕ್ಕಿಂತಲೂ ಹೆಚ್ಚಿನ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಒಟ್ಟು ಜಾಗತಿಕ ಪ್ರಕರಣಗಳ 16 ಶೇಕಡಕ್ಕೂ ಹೆಚ್ಚು ಭಾಗ ಭಾರತದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News