ವೆನೆಝುವೆಲ ಸರಕಾರದಿಂದ ಮಾನವತೆಯ ವಿರುದ್ಧ ಅಪರಾಧ

Update: 2020-09-17 17:42 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಸೆ. 17: ವೆನೆಝುವೆಲ ಅಧ್ಯಕ್ಷ ನಿಕೊಲಸ್ ಮಡುರೊ ಸರಕಾರವು ಕೊಲೆಗಳು ಮತ್ತು ಚಿತ್ರಹಿಂಸೆ ಸೇರಿದಂತೆ ವ್ಯವಸ್ಥಿತ ಮಾನವಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿದೆ ಹಾಗೂ ಮಾನವತೆಯ ವಿರುದ್ಧದ ಅಪರಾಧಗಳನ್ನು ಮಾಡಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ತನಿಖಾಗಾರರು ಬುಧವಾರ ಸಲ್ಲಿಸಿದ ವರದಿಯೊಂದರಲ್ಲಿ ಹೇಳಿದ್ದಾರೆ.

ವಿರೋಧವನ್ನು ದಮನಿಸಲು ಮಡುರೊ ಮತ್ತು ಅವರ ಆಂತರಿಕ ಭದ್ರತೆ ಮತ್ತು ರಕ್ಷಣಾ ಸಚಿವರು ಮಾನವತೆಯ ವಿರುದ್ಧದ ಅಪರಾಧಗಳನ್ನು ಮಾಡುವಂತೆ ಆದೇಶಿಸಿದ್ದಾರೆ ಎಂದು ಭಾವಿಸುವುದಕ್ಕೆ ನಂಬಲರ್ಹ ಆಧಾರಗಳಿವೆ ಎಂದು ವರದಿ ಹೇಳಿದೆ.

ವಿಶೇಷವಾಗಿ, ನ್ಯಾಯಾಂಗದ ಆದೇಶವಿಲ್ಲದೆ ವಿರೋಧಿಗಳನ್ನು ಬಂಧಿಸಲು ರಾಷ್ಟ್ರೀಯ ಗುಪ್ತಚರ ಸಂಸ್ಥೆಗಳಿಗೆ ಮಡುರೊ ಆದೇಶ ನೀಡಿದ್ದಾರೆ ಎನ್ನುವುದಕ್ಕೆ ಸಂಬಂಧಿಸಿದ ಮಾಹಿತಿಯಿದೆ ಎಂದು ವಿಶ್ವಸಂಸ್ಥೆಯ ಸತ್ಯಶೋಧನಾ ತಂಡದ ಫ್ರಾನ್ಸಿಸ್ಕೊ ಕಾಕ್ಸ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News