ವೆನ್ಲಾಕ್- ಬಂದರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ

Update: 2020-09-18 10:32 GMT

ಮಂಗಳೂರು, ಸೆ.18: ನಗರದ ಬಂದರು ಬಳಿ 45 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ವೆನ್‌ಲಾಕ್- ಬಂದರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಡೊಂಗರಕೇರಿ, ಕೊಡಿಯಾಲ್‌ಬೈಲ್, ಕಂಬಳ, ಸೆಂಟ್ರಲ್, ಬಂದರು, ಪೋರ್ಟ್, ಕೋರ್ಟ್ ಸೇರಿದಂತೆ 7 ವಾರ್ಡ್‌ಗಳನ್ನು ಒಳಗೊಂಡು ಈ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯಾಚರಿಸಲಿದೆ ಎಂದರು.

ಮುಂದೆ ಡೊಂಗರಕೇರಿ, ಕೊಡಿಯಾಲ್ ‌ಬೈಲ್, ಕಂಬಳ ವಾರ್ಡ್‌ಗೆ ಹೊಸ ಆರೋಗ್ಯ ಕೇಂದ್ರ ನೀಡುವ ನಿಟ್ಟಿನಲ್ಲಿ ಉಳಿದ ವಾರ್ಡ್‌ಗಳನ್ನು ಈ ಕೇಂದ್ರಕ್ಕೆ ಸೀಮಿತಗೊಳಿಸಿ ಹೊಸ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಮಾತ್ರವಲ್ಲದೆ ಆರೋಗ್ಯ ಇಲಾಖೆಯಿಂದ ಮಾಡಲಾದ ವಾರ್ಡ್‌ ವಿಂಗಡನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಂಡು ಜನಸಾಮಾನ್ಯರಿಗೆ ತೊಂದರೆ ಆಗದಂತೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ನೂತನ ಕಟ್ಟಡದಲ್ಲಿ ಡಿಸ್ಪೆನ್ಸರಿ, ಪ್ರಯೋಗಾಲಯ, ಔಷಧ ಕೊಠಡಿ, ವೈದ್ಯಾಕಾರಿಗಳ ಕೊಠಡಿಗಳು, ಇಂಜೆಕ್ಷನ್ ಹಾಗೂ ಡ್ರೆಸ್ಸಿಂಗ್ ಕೊಠಡಿಗಳನ್ನು ಹೊಂದಿದೆ.

ಉದ್ಘಾಟನಾ ಸಮಾರಂಭದಲ್ಲಿ ಮೇಯರ್ ದಿವಾಕರ ಪಾಂಡೇಶ್ವರ, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷೆ ಪೂರ್ಣಿಮಾ, ಸ್ಥಳೀಯ ಕಾರ್ಪೊರೇಟರ್ ರಮೀಜಾ ಬಾನು, ಜಿಲ್ಲಾ ಆರೋಗ್ಯಾಕಾರಿ ಡಾ. ರಾಮಚಂದ್ರ ಬಾಯರಿ, ಡಾ. ರಾಜೇಶ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News