​ಮಂಗಳೂರು ವಿವಿಯಲ್ಲಿ ಬ್ಯಾರಿ ಕಲಾ ಪ್ರಕಾರಗಳ ಡಿಪ್ಲೊಮಾ ಕೋರ್ಸ್ ಆರಂಭಿಸಲು ಮನವಿ

Update: 2020-09-18 12:26 GMT

ಮಂಗಳೂರು, ಸೆ.18: ಕೇಂದ್ರ ಸರಕಾರದ ಹೊಸ ಶೈಕ್ಷಣಿಕ ನೀತಿಯ ಪ್ರಕಾರ ಜನಪದ, ಸಾಂಪ್ರದಾಯಿಕ ಕಲೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಯಾ ಜನಾಂಗ ಭಾಷೆಗೆ ಸಂಬಂಧಿಸಿದ ಕಲಾ ಪ್ರಕಾರಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ಸರ್ಟಿಫಿಕೆಟ್ ಅಥವಾ ಡಿಪ್ಲೊಮಾ ಕೋರ್ಸ್ ಮೂಲಕ ಪ್ರಾರಂಭ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಬ್ಯಾರಿ ಜಾನಪದ ಕಲೆಗಳಾದ ದಫ್, ಬುರ್ದಾ, ಒಪ್ಪನೆ, ಕೋಲ್ಕಲಿ ನೃತ್ಯ ಪ್ರಕಾರವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕ ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್‌ಗಳಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಬೇಕು ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮನವಿ ಮಾಡಿದ್ದಾರೆ.

ಇದರಿಂದ ಬ್ಯಾರಿ ಕಲೆ, ಸಂಸ್ಕೃತಿಯ ಉಳಿಯಲು ಸಾಧ್ಯವಿದೆ. ಅಲ್ಲದೆ ಈ ಕಲೆಯ ಬಗ್ಗೆ ಕೀಳರಿಮೆ ಕಡಿಮೆಯಾಗಿ ಮೂಲ ಜಾನಪದ ಕಲೆಗಳಿಗೆ ಜೀವ ನೀಡಿದಂತಾಗುತ್ತದೆ. ವಿಶ್ವವಿದ್ಯಾನಿಲಗಳಿಂದ ಪ್ರಮಾಣ ಪತ್ರ ನೀಡಿದಲ್ಲಿ ಇದು ವೃತ್ತಿಪರವಾಗಿಯು ಉಪಯೋಗವಾಗುತ್ತದೆ. ಈ ಕುರಿತು ಆಳವಾದ ಸಂಶೋಧನೆ ನಡೆಸಲು ಸಹಕಾರಿಯಾಗುತ್ತದೆ. ಈ ಕೋರ್ಸ್‌ಗೆ ಪೂರಕವಾಗಿ ಬೇಕಾಗುವ ಪಠ್ಯಕ್ರಮ, ಸಂಪನ್ಮೂಲ ವ್ಯಕ್ತಿಗಳನ್ನು ಕೂಡ ಬ್ಯಾರಿ ಅಕಾಡಮಿಯಿಂದ ನೀಡಲಾಗುವುದು. ಹಾಗಾಗಿ ಈ ಪ್ರಸ್ತಾವನೆಯನ್ನು ಅಕಾಡಮಿ ಕೌನ್ಸಿಲ್ನಲ್ಲಿಟ್ಟು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News