​ಫಾದರ್ ಮುಲ್ಲರ್ಸ್‌ನಲ್ಲಿ ರೋಗಿಗಳ ಸುರಕ್ಷಾ ದಿನ

Update: 2020-09-18 12:49 GMT

ಮಂಗಳೂರು, ಸೆ.18: ವಿಶ್ವ ರೋಗಿಗಳ ದಿನದ ಅಂಗವಾಗಿ ಫಾದರ್ ಮುಲ್ಲರ್ ಮೆಡಿಕಲ್‌ಕಾಲೇಜು ಆಸ್ಪತ್ರೆಯಲ್ಲಿ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಯಿತು. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸುರಕ್ಷೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಪೋಸ್ಟರ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಅನೆಸ್ತೇಶಿಯಾಶಾಶ್ತ್ರ ವಿಭಾಗದ ಪ್ರೊಫೆಸರ್ ತರಬೇತಿ ಗುಣಮಟ್ಟ ವ್ಯವಸ್ಥಾಪಕರಾದ ಡಾ.ಲೂಲು ಶರೀಫ್ ಹಾಗೂ ತರಬೇತಿ ವಿಭಾಗದ ಸಹಾಯಕಗುಣಮಟ್ಟ ವ್ಯವಸ್ಥಾಪಕಿಜೆರ್ಲಿನ್‌ಡಿಸೋಜಾ ನಿರ್ವಹಿಸಿದರು. ಸುಮಾರು 150 ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಎಪ್‌ಎಂಎಂಸಿಎಚ್ ಆಡಳಿತಾಧಿಕಾರಿ ರೆ.ಫಾ. ರುಡಾಲ್ಫ್ ರವಿ ಡೇಸಾ, ಎಫ್‌ಎಂಎಂಸಿ ಮತ್ತು ಬಜ್ಪೆಯಲ್ಲಿರುವ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರದ ಆಡಳಿತಾಧಿಕಾರಿ ರೆ.ಫಾ. ಅಜಿತ್ ಮಿನೇಜಸ್, ಫಾದರ್ ಮುಲ್ಲರ್ ಹೋಮಿಯೋಪಥಿಕ್ ಕಾಲೇಜು ಮತ್ತು ಪಾರ್ಮಸ್ಯೂಟಿಕ ಸಂಸ್ಥೆಯ ಆಡಳಿತಾಧಿಕಾರಿ ರೆ.ಫಾ. ರೋಶನ್‌ಕ್ರಾಸ್ತಾ, ತುಂಬೆ ಪಾದರ್ ಮುಲ್ಲರ್‌ಆಸ್ಪತ್ರೆಯ ಆಡಳಿತಾಧಿಕಾರಿ ರೆವರೆಂಡ್ ಪಾದರ್ ಸಿಲ್ವೆಸ್ಟೆರ್ ಲೋಬೊ ಮೊದಲಾದವರು ಮಾತನಾಡಿದರು.

ಎಫ್‌ಎಂಸಿಐ ನಿರ್ದೇಶಕ ರೆ.ಫಾ. ರಿಚರ್ಡ್ ಕೊಯೆಲ್ಲೋ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಯಲ್ಲಿ ಪ್ಲಾವಿಯಾ ಡಿಸೋಜಾ ಮತ್ತು ಆಶ್ನಾ ಫಿಯೋನಾ ಲೂಯಿಸ್ ಪ್ರಥಮ ಸ್ಥಾನ ಹಾಗೂ ರಿರಿಕಾ ವೆಲ್ನಾತಿ ಮತ್ತು ಅನನ್ಯ ನಾಯಕ್ ದ್ವಿತೀಯ ಬಹುಮಾನ ಪಡೆದರು.

ಅರಲ್ ಅಲಿಶಾ ಮೋಂತೆರೊ ಮತ್ತು ಆರೋನ್‌ಡೆನ್ಸಿಲ್ ಲೋಬೊ ಮೂರನೇ ಬಹುಮಾನ ಪಡೆದರು. ಪಾಲ್ಗೊಂಡ ಎಲ್ಲರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News