ಕೋವಿಡ್ -19 ಚಿಕಿತ್ಸೆ ಬಗ್ಗೆ ಭಯ ಬೇಡ : ಡಾ.ಹನ್ಸರಾಜ್ ಆಳ್ವ

Update: 2020-09-18 14:29 GMT

ಮಂಗಳೂರು : ಕೋವಿಡ್ - 19 ಚಿಕಿತ್ಸೆಗಾಗಿ ಭಯಪಡಬೇಕಾಗಿಲ್ಲ. ರೋಗ ಲಕ್ಷಣ ಕಂಡು ಬಂದರೆ ಆರಂಭದಲ್ಲಿ ತಪಾಸಣೆ ಮಾಡಿರುವುದರಿಂದ ಜಿಲ್ಲೆಯಲ್ಲಿ ರೋಗ ನಿಯಂತ್ರಣವನ್ನು ಮಾಡಬಹುದು, ಈ ಬಗ್ಗೆ ಜನಜಾಗೃತಿ ಅಗತ್ಯ ಎಂದು ಡಾ. ಹನ್ಸರಾಜ್ ಆಳ್ವ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಚಿಕಿತ್ಸೆ ಮಾಡಲು ವೈದ್ಯರ ಬಳಿ ಬರುವುದರಿಂದ ಸಾವಿನ ಪ್ರಮಾಣ ಮತ್ತು ರೋಗ ಉಲ್ಭಣಗೊಳ್ಳುವ ಪ್ರಮಾಣ ಹೆಚ್ಚಾಗಬಹುದು. ರೋಗ ಉಲ್ಬಣಗೊಂಡ ನಂತರ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದು. ಆರಂಭದ ಹಂತದಲ್ಲಿ ರೋಗ ಲಕ್ಷಣಗಳು ಕಂಡು ಬಂದರೆ ಉಸಿರಾಟದ ಗಂಭೀರ ಸಮಸ್ಯೆಗಳಿಲ್ಲದೆ ಮನೆಯಲ್ಲಿ ಉಳಿದು ಕೊಂಡು( ಹೋಂ ಕ್ವಾರಂಟೈನ್ )ಚಿಕಿತ್ಸೆ ಪಡೆದುಕೊಂಡು ಮನೆಯವರ ಆರೋಗ್ಯದ ಬಗ್ಗೆಯೂ ನಿಗಾವಹಿಸುವುದು ಉತ್ತಮ ಎಂದು ಡಾ. ಹನ್ಸರಾಜ್ ತಿಳಿಸಿದ್ದಾರೆ.

ಕೋವಿಡ್ -19 ಸಮಸ್ಯೆ ಯಿಂದ ಬಳಲುತ್ತಿರುವ ರೋಗಿಗಳಿಗೆ ಅವರ ಬಳಿ  ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸರಕಾರದ ಆಡಳಿತ ವ್ಯವಸ್ಥೆ ಇನ್ನಷ್ಟು ಗಮನಹರಿಸಬೇಕಾಗಿದೆ. ಜನರು ಸಕಾಲದಲ್ಲಿ ಚಿಕಿತ್ಸೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ರೋಗ ಉಲ್ಭಣಗೊಂಡ ಬಳಿಕ ಚಿಕಿತ್ಸೆ ಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಜಿಲ್ಲೆಯಲ್ಲಿ ತಡೆಯಬೇಕಾಗಿದೆ. ದೇಶದಲ್ಲಿ ಕೋವಿಡ್-19 ಕಾಯಿಲೆಯಿಂದ ಇದು ವರೆಗೆ 380 ವೈದ್ಯರು ಸಾವಿಗೀಡಾಗಿದ್ದಾರೆ. ಕೋವಿಡ್ -19 ರೋಗಿಗಳ ಜೊತೆ ವೈದ್ಯರು ನಿರಂತರವಾಗಿ ಇರುವುದರಿಂದ ವೈದ್ಯರಿಗೆ ಸೋಂಕು ಹರಡುವ ಪ್ರಮಾಣ ಇತರರಿಗಿಂತ ಶೇ 17 ಪ್ರಮಾಣ ಹೆಚ್ಚು ಎನ್ನುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ಬಗ್ಗೆ ಅಪನಂಬಿಕೆ ಬೇಡ ಎಂದು ಡಾ.ಹನ್ಸರಾಜ್ ತಿಳಿಸಿದ್ದಾರೆ.

ಜನರು ಮುನ್ನೆಚ್ಚರಿಕೆಗಾಗಿ ರೋಗ ಹರಡುವ ವೇಗವನ್ನು ತಡೆಯಲು ಮಾಸ್ಕ್ ಬಳಕೆ ಉತ್ತಮ ಅದನ್ನು ಪಾಲಿಸಬೇಕು ತಮ್ಮಿಂದ ಇತರರಿಗೆ ರೋಗ ಹರಡದಂತೆ ಇರಬೇಕಾದರೆ ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ವೈದ್ಯರನ್ನು ಕಂಡು ಕೋವಿಡ್ ತಪಾಸಣೆ ಸೂಕ್ತ. ಕೋವಿಡ್ ತಪಾಸಣೆಯ ವಿಚಾರದಲ್ಲಿ ಆಸ್ಪತ್ರೆ ಗಳಲ್ಲಿ ಸರಕಾರ ನಿಗದಿಪಡಿಸಿದ ದರವನ್ನು ಮಾತ್ರ ವಿಧಿಸಲಾಗುತ್ತದೆ ಎಂದು ಹನ್ಸರಾಜ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಡಾ.ರವೀಶ್ ತುಂಗಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News