ದ.ಕ.ಜಿಲ್ಲೆ : 456 ಮಂದಿಗೆ ಕೊರೋನ ಪಾಸಿಟಿವ್; 11 ಬಲಿ

Update: 2020-09-18 14:42 GMT

ಮಂಗಳೂರು, ಸೆ.18: ದ.ಕ.ಜಿಲ್ಲೆಯಲ್ಲಿ ಶುಕ್ರವಾರ 456 ಮಂದಿಯಲ್ಲಿ ಕೊರೋನ ಸೋಂಕಿನ ಪಾಟಿಸಿವ್ ಪತ್ತೆಯಾಗಿದ್ದು, 11 ಮಂದಿ ಬಲಿಯಾಗಿದ್ದಾರೆ.

ಶುಕ್ರವಾರ ಪಾಸಿಟಿವ್‌ಗೊಳಗಾದ 456 ಮಂದಿಯಲ್ಲಿ ಮಂಗಳೂರಿನ 242, ಬಂಟ್ವಾಳದ 86, ಪುತ್ತೂರಿನ 27, ಸುಳ್ಯದ 26, ಬೆಳ್ತಂಗಡಿಯ 40 ಮತ್ತು ಹೊರ ಜಿಲ್ಲೆಯ 35 ಮಂದಿ ಸೇರಿದ್ದಾರೆ. ಶುಕ್ರವಾರ ವರದಿಯಾದ 456 ಮಂದಿಯ ಸಹಿತ ಈವರೆಗೆ ಜಿಲ್ಲೆಯಲ್ಲಿ ಒಟ್ಟು 19,322 ಮಂದಿಗೆ ಕೊರೋನ ಸೋಂಕು ತಗುಲಿದೆ.

ಮಂಗಳೂರು ತಾಲೂಕಿನ 6, ಬಂಟ್ವಾಳ, ಪುತ್ತೂರು, ಸುಳ್ಯದ ತಲಾ 1 ಮತ್ತು ಹೊರಜಿಲ್ಲೆಯ ಇಬ್ಬರ ಸಹಿತ ಜಿಲ್ಲೆಯಲ್ಲಿ ಶುಕ್ರವಾರ 11 ಮಂದಿ ಕೊರೋನಕ್ಕೆ ಬಲಿಯಾಗಿದ್ದು, ಇದರೊಂದಿಗೆ ಈವರೆಗೆ ಬಲಿಯಾದವರ ಸಂಖ್ಯೆ 472ಕ್ಕೇರಿದೆ.

ಈವರೆಗೆ ದ.ಕ.ಜಿಲ್ಲೆಯ 1,33,787 ಮಂದಿಯ ಗಂಟಲಿನ ದ್ರವದ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 19,322 ಮಂದಿಯ ವರದಿ ಪಾಸಿಟಿವ್ ಮತ್ತು 1,14,465 ಮಂದಿಯ ವರದಿ ನೆಗೆಟಿವ್ ಬಂದಿದೆ.

ಜಿಲ್ಲೆಯಲ್ಲಿ ಶುಕ್ರವಾರ 340 ಮಂದಿ ಕೊರೋನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅದರಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರದ 6, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 308 ಮತ್ತು ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 26 ಮಂದಿ ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿ ನಿಂದ ಗುಣಮುಖರಾದವರ ಸಂಖ್ಯೆ 14,344ಕ್ಕೇರಿದೆ. ಜಿಲ್ಲೆಯಲ್ಲಿ 4,506 ಸಕ್ರಿಯ ಪ್ರಕರಣಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News