ಬಿಜೆಪಿ ಪಕ್ಷದ ಬ್ಯಾನರ್ ನಲ್ಲಿ ಸರಕಾರಿ ಅಧಿಕಾರಿಯ ಫೋಟೊ : ಜಿಲ್ಲಾಧಿಕಾರಿಗೆ ದೂರು

Update: 2020-09-18 15:13 GMT

ಬೆಳ್ತಂಗಡಿ :  ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಬಿಜೆಪಿಯ ಪಕ್ಷದ ಚಿಹ್ನೆಯೊಂದಿಗೆ ಶಾಸಕರಿಗೆ ಶುಭ ಹಾರೈಸಿರುವ ಬ್ಯಾನರ್ ನಲ್ಲಿ ತನ್ನ ಫೊಟೋವನ್ನು ಹಾಕಿ ಅಳವಡಿಸಿದ್ದು, ಈ ಬಗ್ಗೆ ಸ್ಥಳೀಯ ನಾಗರಿಕರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಅವರು ನೀಡಿರುವ ದೂರಿನಂತೆ ಸದ್ರಿ ಮಹಿಳಾ ಅಧಿಕಾರಿಯು ಸರಕಾರಿ ಸೇವೆಯಲ್ಲಿದ್ದರೂ ಸ್ಥಳೀಯವಾಗಿ ಬಿಜೆಪಿಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿ ದ್ದು ಇದೀಗ ಬಹಿರಂಗವಾಗಿ ಬಿಜೆಪಿಯ ಚಿಹ್ನೆಯಿರುವ ಬ್ಯಾನರ್ ಅನ್ನು ಅಳವಾಡಿಸಿ ಅಧಿಕೃತವಾಗಿ ರಾಜಕೀಯ ಪಕ್ಷದಲ್ಲಿ ತೊಡಗಿಸಿಕೊಂಡಿರುವುದನ್ನು ಬಹಿರಂಗ ಪಡಿಸಿದ್ದಾರೆ. ಇವರು ತಮ್ಮ ಕಚೇರಿಯಲ್ಲಿಯೂ ರಾಜಕೀಯ ಪ್ರೇರಿತರಾಗಿ ಕೆಲಸ ಮಾಡಿರುವ ಅನುಮಾನವಿದೆ. ಇದರಿಂದ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ನಾಗರಿಕರು ಜಿಲ್ಲಾಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯವರಿಗೂ ದೂರು ನೀಡಿದ್ದಾರೆ. ಇವರು ಹಾಕಿರುವ ಬ್ಯಾನರ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News