​ಮಲಾರ್ ನಲ್ಲಿ ಸಾಧಕರಿಗೆ ಸನ್ಮಾನ

Update: 2020-09-18 15:46 GMT

ಕೊಣಾಜೆ : ಮನುಷ್ಯನಲ್ಲಿ ನಯ, ವಿನಯ, ಇನ್ನಿತರರಿಗೆ ಗೌರವಿಸುವ ಗುಣ ಅಗತ್ಯ. ಇಂತಹ ಗುಣಗಳು ನಮ್ಮನ್ನು ಶ್ರೇಷ್ಟತೆಯಡೆಗೆ ಕೊಂಡೊ ಯ್ಯುತ್ತದೆ ಎಂದು ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಮುಹಮ್ಮದ್ ಹನೀಫ್ ಫೈಝಿ ಅಭಿಪ್ರಾಯಪಟ್ಟರು.

ಹರೇಕಳ ಮಲಾರ್ ಎಜ್ಯುಕೇಶನ್ ಸೊಸೈಟಿ ಇದರ ವತಿಯಿಂದ ಮಲಾರ್ ಪದವು ಮೈದಾನದಲ್ಲಿ ಶುಕ್ರವಾರ ನಡೆದ ಸಾಧಕರಿಗೆ ಸನ್ಮಾನ ಸಭಾ ಕಾರ್ಯಕ್ರಮ ಉದ್ಘಾಟಿಸಿ‌ ಮಾತನಾಡಿದರು.

ಸಮಾಜದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಮುಂದಿನ ತಲೆಮಾರಿಗೂ ಅವರ ಆದರ್ಶಗಳನ್ನು ಪರಿಚಯಿಸಿ ಮುಂದುವರಿಸು ವುದು ಸಂಘಟನೆಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಎಂಇಎಸ್ ಅಧ್ಯಕ್ಷ ಎಸ್.ಎಂ.ಇಸ್ಮಾಯಿಲ್ ಮಲಾರ್ ಕೋಡಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಎಂ.ಎಚ್.ಮಲಾರ್, ರಾಧಾಕೃಷ್ಣ ರಾವ್ ಹಾಗೂ ಪತ್ರಕರ್ತ ಅನ್ಸಾರ್ ಇನೋಳಿ ಅವರನ್ನು ಸನ್ಮಾನಿಸಲಾಯಿತು. ಮುಸ್ಲಿಂ ಜಮಾಅತ್ ಒಕ್ಕೂಟದ ಸಂಚಾಲಕ ಅಬ್ದುಲ್ ರಝಾಕ್,  ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಮಲಾರ್, ನೂರುಲ್ ಇಸ್ಲಾಂ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಹ್ಮತುಲ್ಲಾ,  ಮಲಾರ್ ಹೆಲ್ಪ್ ಲೈನ್ ಸಂಚಾಲಕ ಕಬೀರ್ ಮಲಾರ್, ಎಂಇಎಸ್ ಗೌರವಾಧ್ಯಕ್ಷ ಮುಸ್ತಫಾ ಮಲಾರ್,‌ ಗಲ್ಫ್ ಘಟಕದ ಅಧ್ಯಕ್ಷ ಆಶ್ರಫ್ ಮದೀನಾ, ಕೋಶಾಧಿಕಾರಿ ಮುಸ್ತಫಾ, ಜತೆಕಾರ್ಯದರ್ಶಿ ಅಟೋ ನಾಸೀರ್ ಮಲಾರ್, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜತೆಕಾರ್ಯದರ್ಶಿ ಮುಹಮ್ಮದ್ ಹಫೀಝ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಝಾಯಿದ್ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿರಾಜ್ ವಂದಿಸಿದರು. ನಿಯಾಫ್ ಕಾರ್ಯಕ್ರಮ ನಿರೂಪಿಸಿದರು.

'ಕರೋನ ಬಳಿಕ ಸ್ಥಳೀಯ ಪ್ರದೇಶದಲ್ಲಿ ಪ್ರಥಮ ಸಾರ್ವಜನಿಕ ಕಾರ್ಯಕ್ರಮ ನಡೆಸಲಾಗಿದೆ, ಎಲ್ಲಾ ಕ್ಷೇತ್ರದಲ್ಲೂ‌‌ ಪೈಪೋಟಿ ಇದೆ. ಅದರೊಂದಿಗೆ ತಾಳ್ಮೆ ಮತ್ತು ಛಲದಿಂದ ಎದುರಿಸಿ ಪ್ರಶಸ್ತಿ ಪಡೆಯುವುದಕ್ಕಿಂತ‌ ದೊಡ್ಡ ಗೌರವ ಇನ್ನೊಂದಿಲ್ಲ'

- ಮುಹಮ್ಮದ್ ಮುಸ್ತಫಾ ಮಲಾರ್, ಎಂಇಎಸ್ ಗೌರವಾಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News