ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮತ್ತೆ ಕಾಣಿಸಿಕೊಂಡ ‘ಪೇಟಿಎಂ’

Update: 2020-09-18 17:02 GMT

ಹೊಸದಿಲ್ಲಿ: ಗೂಗಲ್ ಪ್ಲೇ ಸ್ಟೋರ್ ನಿಂದ ಮರೆಯಾಗಿದ್ದ ‘ಪೇಟಿಎಂ’ ಈಗ ಮತ್ತೆ ಪ್ಲೇ ಸ್ಟೋರ್ ಗೆ ಹಿಂದಿರುಗಿದೆ.

“ಅಪ್ ಡೇಟ್: ನಾವು ಹಿಂದಿರುಗಿದ್ದೇವೆ” ಎಂದು ಟ್ವಿಟರ್ ನಲ್ಲಿ ಪೇಟಿಎಂ ಬಳಕೆದಾರರಿಗೆ ಮಾಹಿತಿ ನೀಡಿದೆ. ಪ್ಲೇಸ್ಟೋರ್ ನಿಂದ ಪೇಟಿಎಂ ಕಾಣೆಯಾದ ಬಳಿಕ ಲಕ್ಷಾಂತರ ಬಳಕೆದಾರರು ತಮ್ಮ ಹಣದ ಬಗ್ಗೆ ಆತಂಕಿತರಾಗಿದ್ದರು.

ಪೇಟಿಎಂ ತೆಗೆದು ಹಾಕಿದ್ದಕ್ಕೆ ವಿವರಣೆಯಾಗಿ ಗೂಗಲ್, ತನ್ನ ವೇದಿಕೆಯಲ್ಲಿ ಯಾವುದೇ ಜೂಜಿನ ಆ್ಯಪ್ ಅನ್ನು ಅನುಮೋದಿಸುವುದಿಲ್ಲ ಎಂದು ಹೇಳಿದೆ. ಅಲ್ಲದೆ ಬ್ಲಾಗ್‌ನಲ್ಲಿ, ‘‘ಭಾರತದಲ್ಲಿ ನಮ್ಮ ಜೂಜಿನ ಆಟದ ನೀತಿಯನ್ನು ಅರ್ಥ ಮಾಡಿಕೊಳ್ಳಿ’’ ಎಂಬ ಪೋಸ್ಟ್ ಹಾಕಿದೆ.

 “ನಮ್ಮ ಗ್ರಾಹಕರಿಗೆ ಸುರಕ್ಷಿತ ಅನುಭವ ಒದಗಿಸಲು ಗೂಗಲ್ ಪ್ಲೇಯನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಡೆವಲಪರ್ಸ್‌ಗಳಿಗೆ ಸುಸ್ಥಿರ ವ್ಯವಹಾರ ರೂಪಿಸಲು ಅಗತ್ಯವಾದ ವೇದಿಕೆ ಹಾಗೂ ಸಾಧನಗಳನ್ನು ನೀಡುತ್ತದೆ. ನಮ್ಮ ಎಲ್ಲ ಪಾಲುದಾರರ ಉತ್ತಮಿಕೆ ಪರಿಗಣಿಸಿ, ಗುರಿಯನ್ನು ಗಮನದಲ್ಲಿರಿಸಿಕೊಂಡು ಜಾಗತಿಕ ನೀತಿಯನ್ನು ರೂಪಿಸಲಾಗಿದೆ” ಎಂದು ಗೂಗಲ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News