4 ವರ್ಷಗಳಲ್ಲಿ ರಾಜ್ಯದ ಸಾಂಸ್ಕೃತಿಕ ವಲಯ ಸಂಪನ್ನ: ಸಚಿವ ಎ.ಕೆ.ಬಾಲನ್

Update: 2020-09-18 16:57 GMT

ಕಾಸರಗೋಡು : ವೈವಿಧ್ಯಮಯ ಯೋಜನೆಗಳ ಜಾರಿಯ ಮೂಲಕ ರಾಜ್ಯದ ಸಾಂಸ್ಕೃತಿಕ ವಲಯವನ್ನು ಸಂಪನ್ನಗೊಳಿಸಲು ಸಾಧ್ಯವಾಗಿದೆ ಎಂದು ಸಂಸ್ಕೃತಿ ಸಚಿವ ಎ.ಕೆ.ಬಾಲನ್ ಅಭಿಪ್ರಾಯಪಟ್ಟರು.

ಕೇರಳ ತುಳು ಅಕಾಡೆಮಿಗಾಗಿ ರಾಜ್ಯ ಸರಕಾರ ಹೊಸಂಗಡಿ ಬಳಿಯ ದುರ್ಗಿಪಳ್ಳದಲ್ಲಿ ನಿರ್ಮಿಸಲಾದ ಕೇರಳ ತುಳುಭವನವನ್ನು ಶುಕ್ರವಾರ ಸಂಜೆ ಆನ್ ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ವಲಯಗಳನ್ನೂ ಸ್ಪರ್ಶಿಸುವ ಯೋಜನೆಗಳ ಮೂಲಕ ರಾಜ್ಯದ ಸಾಂಸ್ಕೃತಿಕ ರಂಗ ದೊಡ್ಡ ಸಂಚಲನ ಸೃಷ್ಟಿಸಿದೆ. ನವೋತ್ಥಾನ ಮೌಲ್ಯಗಳನ್ನು ಮರಳಿ ತರುವ ನಿಟ್ಟಿನಲ್ಲಿ ಅನೇಕ ಪ್ರತಿಬಂಧಕಗಳನ್ನು ದಾಟಿ ಅನೇಕ ಯೋಜನೆಗಳು ಇಲ್ಲಿ ಅನುಷ್ಠಾನಗೊಂಡಿವೆ. ಪ್ರತಿ ಜಿಲ್ಲೆ ಗಳಲ್ಲೂ ಕೋಟಿಗಟ್ಟಲೆ ರೂ. ವೆಚ್ಚಗೊಳಿಸಿ ಸಾಮಸ್ಕೃತಿಕ ನಾಯಕರ ಹೆಸರಲ್ಲಿ ಭವ್ಯ ಕಟ್ಟಡಗಳು ತಲೆಎತ್ತುತ್ತಿವೆ. ಇದರ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಕಳೆದ ದಿನ 42 ಕೊಟಿ ರೂ. ವೆಚ್ಚದಲ್ಲಿ ಸುಬ್ರಹ್ಮಣ್ಯಂ ತಿರುಮುಂಬ್ ಅವರ ನಾಮಧೇಯದಲ್ಲಿ ಸಂಸ್ಕೃತಿ ನಿಲಯ ಉದ್ಘಾಟನೆ ನಡೆಸಲು ಸಾಧ್ಯವಾಗಿದೆ ಎಂದವರು ತಿಳಿಸಿದರು.

ತುಳು ನಾಡಿನ ಜನತೆಯ ಸ್ವಂತಿಕೆಯ ಪ್ರತೀಕ ತುಳು ಭವನ: ಸಚಿವ ಎ.ಕೆ.ಬಾಲನ್ 

ತುಳುಭವನ ತುಳು ಜನತೆಯ ಸ್ವಂತಿಕೆಯ ಪ್ರತೀಕ ಎಂದು ಸಂಸ್ಕೃತಿ ಸಚಿವ ಎ.ಕೆ.ಬಾಲನ್ ನುಡಿದರು. ತುಳು ಭಾಷೆ ಸಂಸ್ಕೃತಿಗೆ ಮಹತ್ವಿಕೆ ನೀಡುವ ಅನೇಕ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಲಾಗುವುದು ಎಂದರು.

ನಾಡಿಗಾಗಿ ಅಪಾರ ಸೇವೆ ಸಲ್ಲಿಸಿದ್ದ ಅನೇಕ ಹಿರಿಯ ಸಾಧಕರ ಕುರಿತು ನೂತನ ಜನಾಂಗಕ್ಕೆ ಮಾಹಿತಿಯೇ ಇಲ್ಲ. ಅಂಥವರ ಹೆಜ್ಜೆಗಾರಿಕೆ ಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವ ಬಲುದೊಡ್ಡ ಗುರಿಯೊಂದಿಗೆ ಸಂಸ್ಕೃತಿ ಇಲಾಖೆ ರಂಗದಲ್ಲಿದೆ. ಕಲಾವಿದರ, ಸಾಹಿತಿಗಳ ಹೆಸರಲ್ಲಿ ಗಮನಾರ್ಹ ಕೇಂದ್ರಗಳು ತಲೆಎತ್ತುತ್ತಿವೆ. ಇವುಗಳಲ್ಲಿ ಕೆಲವು ಈಗಾಗಲೇ ನಿರ್ಮಾಣ ಪೂರ್ತಿಗೊಂಡಿವೆ. ಮಹಾತ್ಮಾ ಗಾಂಧಿ ಅವರ ಬಲಿದಾ ನದ 70 ನೇ ವರ್ಷಾಚರಣೆ ಅಂಗವಾಗಿ ಒಂದಿಡೀ ವರ್ಷದ ಆಚರಣೆ ನಡೆಸಲಾಗಿದೆ. ಬಾಪೂಜಿ ಅವರು 3 ಬಾರಿ ಸಂದರ್ಶಿಸಿದ್ದ ಪಾಲಕ್ಕಾಡಿನ ಶಬರಿ ಆಶ್ರಮದ ನವೀಕರಣಕ್ಕೆ 4 ಕೋಟಿ ರೂ. ವೆಚ್ಚ ದಲ್ಲಿ ಚಟುವಟಿಕೆ ನಡೆಸಲಾಗುವುದು ಎಂದರು.

ಎಲ್ಲ ಪ್ರಶಸ್ತಿಗಳ ನಗದು ಬಹುಮಾನಗಳನ್ನು ಏರಿಕೆಗೊಳಿಸಲಾಗಿದೆ. ಆದರೆ ಕೋವಿಡ್ ಸೋಂಕಿನ ಹಾವಳಿ ಆತಂಕ ಸೃಸ್ಟಿಸಿದೆ. ಅನೇಕ ಮುಗಟ್ಟುಗಳ ನಡುವೆಯೂ ಯೋಜನೆಗಳನ್ನು ಯಥಾ ಸಮಯಕ್ಕೆ ಜಾರಿಗೊಳಿಸಲು ಸತತ ಯತ್ನ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.

ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ತ್ರೈಮಾಸ ಪತ್ರಿಕೆ "ತೆಂಬೆರೆ" ಯ ವಿಶೇಷ ಸಂಚಿಕೆಯನ್ನು ಸಂಸದ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು. ಅಕಾಡೆಮಿಯ ಸ್ಥಾಪಕಾಧ್ಯಕ್ಷ ಡಾ.ವೆಂಕಟರಾಜ ಪುಣಿಂಚತ್ತಾಯ ಅವರ ನಾಮಧೇಯದ ಗ್ರಂಥಾಲಯವನ್ನು ಶಾಸಕ ಎಂ.ಸಿ.ಕಮರುದ್ದೀನ್ ಉದ್ಘಾಟಿಸಿದರು. ಎಕ್ಸಿಕ್ಯೂಟಿವ್ ಸಬಾಂಗಣವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಆನ್ ಲೈನ್ ತುಳು ಲಿಪಿ ಕಲಿಕೆ ತರಬೇತಿಯನ್ನು ಉದ್ಘಾಟಿಸಿ ದರು. ಕೋವಿಡ್ ಪ್ರತಿರೋಧ ಅಂಗವಾಗಿ ನಿರ್ಮಿಸಲಾದ ತುಳು ಕಿರುಚಿತ್ರವನ್ನು ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್. ಜಯಾನಂದ ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News