×
Ad

ಕೋವಿಡ್ ಸಂದರ್ಭ ಜನಪರ ಸೇವೆ ಸಲ್ಲಿಸಿದ ಮಹಿಳೆಯರಿಂದ ಅರ್ಜಿ ಆಹ್ವಾನ

Update: 2020-09-19 22:06 IST

ಮಂಗಳೂರು, ಸೆ.19: ಕೋವಿಡ್-19 ವೇಳೆ ಸ್ವ-ಪ್ರೇರಣೆಯಿಂದ ಉತ್ತಮ ಜನಪರ ಕಾರ್ಯ ನಿರ್ವಹಿಸಿದ ಮಹಿಳೆ ಅಥವಾ ಹೆಣ್ಣು ಮಕ್ಕಳನ್ನು ‘ಮಗಳನ್ನು ಉಳಿಸಿ- ಮಗಳನ್ನು ಓದಿಸಿ’ ಕಾರ್ಯಕ್ರಮದಡಿ ಸ್ಥಳೀಯ ಚಾಂಪಿಯನ್ ಆಗಿ ಗುರುತಿಸಲಾಗುತ್ತದೆ.

ಹಾಗಾಗಿ ಕೋವಿಡ್-19 ವೇಳೆ ಬಾಲ್ಯ ವಿವಾಹ ತಡೆಗಟ್ಟಿ ಎಫ್‌ಐಆರ್ ದಾಖಲಿಸುವುದು, ಮನೆ-ಮನೆಗೆ ತೆರಳಿ ಉಚಿತವಾಗಿ ಆಹಾರ ವಿತರಣೆ, ಮಾಸ್ಕ್ ತಯಾರಿಸಿ ಉಚಿತವಾಗಿ ವಿತರಣೆ ಮತ್ತು ಕೋವಿಡ್‌ನಿಂದ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಇತ್ಯಾದಿ ಕೆಲಸ ಕಾರ್ಯವನ್ನು ನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆ, ಸ್ತ್ರೀಶಕ್ತಿ ಸದಸ್ಯರ ಸಹಿತ ಮಹಿಳೆಯು ಸೆ.25ರೊಳಗೆ ಅರ್ಜಿ ಸಲ್ಲಿಸಬಹುದು.

ವಿವರಗಳಿಗೆ ಹಾಗೂ ಅರ್ಜಿ ನಮೂನೆಗಾಗಿ ಸಂಬಂಧಿಸಿದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಥವಾ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಜಿಪಂ, ಮಂಗಳೂರು (ದೂ.ಸಂ: 0824-2451254) ಅವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News