×
Ad

ಅಲ್ ಮದೀನದಲ್ಲಿ ಎಸ್ಸೆಸ್ಸೆಫ್ ಧ್ವಜ ದಿನಾಚರಣೆ

Update: 2020-09-19 22:41 IST

ನರಿಂಗಾನ : ಮಂಜನಾಡಿ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ನಲ್ಲಿ ಎಸ್ಸೆಸ್ಸೆಫ್ ಧ್ಜಜ ದಿನವನ್ನು ಆಚರಿಸಲಾಯಿತು. 

ಅಲ್ ಮದೀನ ಮ್ಯಾನೇಜರ್ ಅಬ್ದುಲ್ ಖಾದಿರ್ ಸಖಾಫಿ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಹಮ್ಮದ್ ಕುಂಞಿ ಅಮ್ಜದಿ ಉದ್ಘಾಟಿಸಿದರು.

ದ. ಕ. ಜಿಲ್ಲಾ ಎಸ್ಸೆಸ್ಸೆಫ್ ವೆಸ್ಟ್ ಝೋನ್ ಅಧ್ಯಕ್ಷರಾದ ಮುನೀ ರ್  ಅಹ್ಮದ್ ಕಾಮಿಲ್ ಸಖಾಫಿ ದಿಕ್ಸೂಚಿ ಭಾಷಣ ಮಾಡಿದರು. ಸಂಸ್ಥೆಯ ಅಧ್ಯಾಪಕ ಅಬ್ದುಲ್ ರಝಾಕ್ ಮಾಸ್ಟರ್ ಶುಭ ಹಾರೈಸಿದರು. ಜುನೈದ್ ಮರ್ಝೂಖಿ ಸ್ವಾಗತಿಸಿದರು. ಮೊಯ್ದಿನ್ ಹಾಜಿ ಮೊಂಟೆಪದವು, ಹಾರಿಸ್ ಮಾಸ್ಟರ್, ಅಬ್ದುರ್ರವೂಫ್ ಮುಸ್ಲಿಯಾರ್, ಹೈದರ್ ಮುಸ್ಲಿಯಾರ್, ಅಬ್ದುನ್ನಾಸಿರ್ ಮರ್ಝೂಖಿ,  ಹಸೈನಾರ್ ಉಪಸ್ಥಿತರಿದ್ದರು.

ಬಿಶಾರತುಲ್ ಮದೀನದ ಕೋಶಾಧಿಕಾರಿ ಅಬ್ದುಸ್ಸಮದ್ ಪರಪ್ಪು ಧನ್ಯವಾದವಿತ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News