ಉಡುಪಿ : ಉಕ್ಕಿ ಹರಿಯುತ್ತಿರುವ ಬಜೆ ಡ್ಯಾಂ, ನೀರಿನ ಮಟ್ಟ 10.5ಮೀಟರ್‌ಗೆ ಏರಿಕೆ

Update: 2020-09-20 08:08 GMT

ಹಿರಿಯಡ್ಕ, ಸೆ.20: ಉಡುಪಿ ನಗರಸಭೆಗೆ ನೀರು ಪೂರೈಕೆ ಮಾಡುವ ಬಜೆ ಡ್ಯಾಂ ಪ್ರದೇಶದಲ್ಲಿ ಸ್ವರ್ಣ ನದಿ ಉಕ್ಕಿ ಹರಿಯುತ್ತಿದ್ದು, ಬೆಳಗಿನ ಜಾವ 4.30ರ ಸುಮಾರಿಗೆ ಪಂಪ್ ಹೌಸ್‌ಗೆ ನೀರು ನುಗ್ಗಿದ ಪರಿಣಾಮ ಪಂಪಿಂಗ್ ಕಾರ್ಯ ಸ್ಥಗಿತಗೊಳಿಸಲಾಗಿದೆ.

ಬಜೆ ಡ್ಯಾಂನ ಸಾಮರ್ಥ್ಯ 4.9 ಮೀಟರ್ ಆಗಿದೆ. ಆದರೆ ಮೊದಲ ಬಾರಿ ಎಂಬಂತೆ ಭಾರೀ ಮಳೆಯಿಂದಾಗಿ ಬಜೆ ಡ್ಯಾಂನಲ್ಲಿ 10.5 ಮೀಟರ್ ನೀರಿನ ಮಟ್ಟ ಏರಿಕೆಯಾಗಿ ಉಕ್ಕಿ ಹರಿಯುತ್ತಿದೆ. ಅಲ್ಲದೆ ಅಲ್ಲೇ ಸಮೀಪದಲ್ಲಿ 9.5 ಮೀಟರ್ ಎತ್ತರದಲ್ಲಿರುವ ಪಂಪ್ ಹೌಸ್‌ಗೂ ನೀರು ನುಗ್ಗಿದೆ.
ಈ ಹಿನ್ನೆಲೆಯಲ್ಲಿ ಬೆಳಗ್ಗೆ 4.55ರಿಂದ ಪಂಪಿಂಗ್ ಕಾರ್ಯ ನಿಲ್ಲಿಸಲಾಗಿದೆ. ಇದರಿಂದ ಸದ್ಯ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.

ನೀರಿನ ಮಟ್ಟಕ್ಕೆ 9 ಮೀಟರ್ ಇಳಿದ ಕೂಡಲೇ ಮೆಸ್ಕಾಂ ಅವರಿಂದ ಪರಿಶೀಲನೆ ನಡೆಸಿ ನಂತರ ಪಂಪ್ ಕಾರ್ಯ ಆರಂಭಿಸಲಾಗುವುದು. ಇಲ್ಲದಿದ್ದರೆ ತಾಂತ್ರಿಕ ಸಮಸ್ಯೆಯಿಂದ ಪಂಪ್ ಸುಟ್ಟು ಹೋಗುವ ಸಾಧ್ಯತೆಗಳಿವೆ ಎಂದು ಉಡುಪಿ ನಗರಸಭೆಯ ಕಾರ್ಯಪಾಲಕ ಇಂಜಿನಿಯರ್ ಮೋಹನ್ ರಾಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News