ಸೂಕ್ತ ಮಾರ್ಗದರ್ಶನ, ಕಠಿಣ ಪರಿಶ್ರಮದಿಂದ ಸರಕಾರಿ ಉನ್ನತ ಹುದ್ದೆ ಪಡೆಯಬಹುದು : ಡಾ.ಸಯ್ಯದ್ ಅಮೀನ್ ಅಹ್ಮದ್

Update: 2020-09-20 09:38 GMT

ಮಂಗಳೂರು : ಇನ್ಫೋಮೇಟ್ ಫೌಂಡೇಶನ್  ಹಾಗೂ ಎಸ್ಎಸ್ಎಫ್, ಎಸ್ವೈಸ್ ಪಾಲ್ಯತ್ತಡ್ಕ ವತಿಯಿಂದ ಸರಕಾರಿ ಉದ್ಯೋಗಾವಕಾಶಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ ಎಂಬ ವಿಷಯದಲ್ಲಿ ‌ಮಾಹಿತಿ ಶಿಬಿರವು ಈಶ್ವರಮಂಗಲ ತ್ವೈಬ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ತ್ವೈಬ ಸೆಂಟರ್‌ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ  ಉದ್ಘಾಟಿಸಿದರು.

ಮಂಗಳೂರು ಪಿಎ ಕಾಲೇಜು ಮ್ಯಾನೇಜ್ಮೆಂಟ್ ಆ್ಯಂಡ್ ರೀಸರ್ಚ್ ಸೆಂಟರ್ ಸೆಂಟರ್ ನಿರ್ದೇಶಕ ಡಾ. ಸಯ್ಯದ್ ಅಮೀನ್ ಅಹ್ಮದ್ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಪಿಯುಸಿ, ಪದವಿಯಲ್ಲಿರುವಾಗಲೇ ಸರ್ಕಾರಿ ಹುದ್ದೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಗುರಿಯೊಂದಿಗೆ ಅಧ್ಯಯನ ನಡೆಸಲು ಕರೆ ನೀಡಿದರು.

ಪರೀಕ್ಷೆಗಳ ಬಗ್ಗೆ ಸೂಕ್ತ ಮಾರ್ಗದರ್ಶನ, ಕಠಿಣ ಪರಿಶ್ರಮ, ಸಾಧಿಸುವ ಛಲವಿದ್ದರೆ ಐಎಎಸ್, ಐಪಿಎಸ್ ನಂತಹಾ ಉನ್ನತ ಹುದ್ದೆಗಳನ್ನು ಅಲಂಕರಿಸುವುದು ಕಷ್ಟವೇನಲ್ಲ ಎಂದರು.

ಇನ್ಫೋಮೇಟ್ ಫೌಂಡೇಶನ್ ನಿರ್ದೇಶಕ ಅಬ್ದುಲ್ ಖಾದರ್ ನಾವೂರು ಪ್ರಾಸ್ತಾವಿಕ ಭಾಷಣಗೈದು ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಪಾಳ್ಯತ್ತಡ್ಕ ಎಸ್.ವೈ.ಎಸ್ ಕಾರ್ಯದರ್ಶಿ ಉಮರ್ ಸಅದಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್.ಎಫ್ ಪಾಳ್ಯತ್ತಡ್ಕ ಶಾಖೆಯ ಅಧ್ಯಕ್ಷ ಸಲೀಂ ಝುಹ್ರಿ ಸ್ವಾಗತಿಸಿದರು. ಇಸ್ಮಾಯಿಲ್ ಕೆ.ಎಚ್, ಖಲೀಲ್ ಬಿ.ಸಿ, ತ್ವಾಹ ಸಅದಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News